ಲಕ್ನೋ: ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ (ಕೆಮ್ಮಿನ ಸಿರಪ್) ಕಳ್ಳಸಾಗಣೆ (Cough Syrup Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ (Uttar Pradesh) ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಕಳೆದ ನವೆಂಬರ್ 15ರಂದು ಕಾರ್ಯಾಚರಣೆ ವೇಳೆ 26 ಕಂಪನಿಗಳ ವಿರುದ್ಧ ಪ್ರಕರಣ (FIR) ದಾಖಲಿಸಿತ್ತು. ಅದರ ಭಾಗವಾಗಿ ಕಾರ್ಯಾಚರಣೆ ಮುಂದುವರಿಸಿದಾಗ 12 ಅನುಮಾನಾಸ್ಪದ ಕಂಪನಿಗಳು ಕಂಡುಬಂದಿದ್ದವು ಎಂದು ಇಲಾಖೆಯ ಇನ್ಸ್‌ಪೆಕ್ಟರ್ ಜನಬ್ ಅಲಿ ಹೇಳಿದ್ದಾರೆ. ಇದನ್ನೂ ಓದಿ: A320 ಸಾಫ್ಟ್‌ವೇರ್‌ನಲ್ಲಿ ದೋಷ – 250ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದತಿ/ವಿಳಂಬ ಸಾಧ್ಯತೆ
ಈ 12 ಕಂಪನಿಗಳ ಕುರಿತು ತನಿಖೆ ಮಾಡಲು ತಂಡ ಹೋದಾಗ, ಕೆಲವು ಮುಚ್ಚಿರುವುದು, ಇನ್ನೂ ಕೆಲ ಕಂಪನಿಗಳ ವಿಳಾಸದಲ್ಲಿ ಬೇರೆ ಮಳಿಗೆಗಳಿರುವುದು ಕಂಡುಬಂದಿವೆ. ಹೀಗಾಗಿ ಈ ಔಷಧ ಕಂಪನಿಗಳ ನಿರ್ವಾಹಕರಿಗೆ ಸ್ಪಷ್ಟೀಕರಣ ಕೋರಿ ನೋಟಿಸ್ ನೀಡಲಾಗಿತ್ತು ಎಂದು ಅಲಿ ತಿಳಿಸಿದ್ದಾರೆ.
ಈ ಕಂಪನಿಗಳ ಮಾಲೀಕರು ತಮ್ಮ ಪ್ರತಿಕ್ರಿಯೆ ಸಲ್ಲಿಸದ ಹಿನ್ನೆಲೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಿದೇಶದಲ್ಲಿ ಆಸ್ತಿ ಹೊಂದಿದ್ದರೆ ಸರಿಯಾದ ವಿವರ ಸಲ್ಲಿಸಿ – ಇಲ್ದಿದ್ರೆ ಬೀಳುತ್ತೆ ಭಾರೀ ದಂಡ!


