ತಮಿಳಿನ ಪಿಸಾಸು ಪಾರ್ಟ್-1 ಹಿಟ್ ಬಳಿಕ ಪಿಸಾಸು ಪಾರ್ಟ್-2 (Pisasu 2) ಸಿನಿಮಾ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಈ ಸಿನಿಮಾವನ್ನ ನಿರ್ದೇಶಕ ಮಿಸ್ಕಿನ್ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ರಾಜ್‍ಕುಮಾರ್ ಪಿಚುಮಣಿ ಮುಂತಾದವರ ಜೊತೆಗೆ ನಟಿ ಆಂಡ್ರಿಯಾ (Actress Andrea Jeremiah) ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಆಂಡ್ರಿಯಾ 15 ನಿಮಿಷಗಳ ಕಾಲ ನಗ್ನವಾಗಿ ನಟಿಸಿದ್ದಾರೆ ಎನ್ನುವ ಮಾತುಗಳು ಸಂಚಲನ ಸೃಷ್ಟಿಸಿದ್ದವು.
ನಿರ್ದೇಶಕರು ಹೇಳಿದ ಮಾತುಗಳು ತಪ್ಪಾಗಿ ಅರ್ಥಮಾಡಿಕೊಳ್ಳಲಾಗ್ತಿದೆ ಅಂತಾ ನಟಿ ಆಂಡ್ರಿಯಾ ಈ ಬಗ್ಗೆ ಮುಕ್ತವಾಗಿ ಮಾತ್ನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಆಂಡ್ರಿಯಾ ಸಿನಿಮಾದಲ್ಲಿನ ನಗ್ನತೆಯ ದೃಶ್ಯದ ಬಗ್ಗೆ ಮಾತಾಡಿದ್ದು, ನಿರ್ದೇಶಕರು ಯಾವುದೇ ಸಿನಿಮಾಗಳಿಲ್ಲದೇ ಈ ಚಿತ್ರವನ್ನ ಆಯ್ಕೆ ಮಾಡಿಕೊಂಡಿಲ್ಲ. ಬದಲಾಗಿ ಅವರಿಗೆ ಬೇರೆ ಆಯ್ಕೆಗಳಿದ್ದರೂ, ಈ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಅವರು ಮಹಿಳಾ ಪ್ರಧಾನ ಸಿನಿಮಾವನ್ನು ಮಾಡುತ್ತಿದ್ದಾರೆ. ಅವರಿಗೆ ಸಾಕಷ್ಟು ಅನುಭವ ಇದೆ ಎಂದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಫ್ರೆಂಡ್‌ಶಿಪ್ ಎಲ್ಲ ನೋ..: ‘ಕಾವು’ ಹೀಗಂದಿದ್ದು ಗಿಲ್ಲಿಗೇನಾ?
ಇನ್ನು ಪಿಸಾಸು-2 ಸಿನಿಮಾದಲ್ಲಿ ನಗ್ನ ದೃಶ್ಯಗಳಿದ್ದವು. ಆದರೆ ನಿರ್ದೇಶಕರು ಆ ಸನ್ನಿವೇಶಗಳನ್ನ ಚಿತ್ರೀಕರಣ ಮಾಡಲಿಲ್ಲ. ಆದರೆ ರೋಮ್ಯಾಂಟಿಕ್ ದೃಶ್ಯಗಳಿವೆ ಎಂದಿದ್ದಾರೆ ನಟಿ ಆಂಡ್ರಿಯಾ. ಇನ್ನು ಮುಂದುವರೆದು ಮಿಸ್ಕಿನ್ ಅವರು ಒಬ್ಬ ಪ್ರತಿಭಾವಂತ ನಿರ್ದೇಶಕರು ಸಿನಿಮಾಕ್ಕಾಗಿ ಬೆತ್ತಲೆ ದೃಶ್ಯದಲ್ಲಿ ನಟಿಸಬೇಕು ಅಂತಾ ಹೇಳಿದ್ರೆ ಹಿಂಜರಿಯದೇ ಒಪ್ಪಿಕೊಳ್ಳುತ್ತಿದ್ದೆ. ಈ ಮಾತುಗಳು ಈಗ ಸಖತ್ ವೈರಲ್ ಆಗ್ತಿವೆ. ಇದನ್ನೂ ಓದಿ: ಬಿಗ್‌ಬಾಸ್ ಮನೇಲಿ ಅಶ್ವಿನಿ ಸೈಲೆಂಟ್.. ಧ್ರುವಂತ್ ವೈಲೆಂಟ್!

