ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಜೋಡಿ ಹಕ್ಕಿಯಂತಿದ್ದ ಗಿಲ್ಲಿ-ಕಾವ್ಯ (Gilli-Kavya) ಮತ್ತೆ ದೂರಾಗ್ತಾರ ಅನ್ನೋ ಪ್ರಶ್ನೆ ಮೂಡಿದೆ. ‘ನನಗೆ ಫ್ರೆಂಡ್‌ಶಿಪ್‌ಗಿಂತ ಪರ್ಫಾರ್ಮೆನ್ಸ್ ಮುಖ್ಯ’ ಅಂತ ಕಾವ್ಯ ಹೇಳಿದ್ದಾರೆ. ‘ಕಾವು’ ಇನ್ಮುಂದೆ ಗಿಲ್ಲಿಯಿಂದ ಅಂತರ ಕಾಯ್ದುಕೊಳ್ತಾರಾ? ಆಟಕ್ಕಷ್ಟೇ ಪ್ರಾಮುಖ್ಯತೆ ಕೊಡ್ತಾರಾ ಅನ್ನೋ ಪ್ರಶ್ನೆ ಮೂಡಿದೆ.
ಉಗ್ರಂ ಮಂಜು ಜೊತೆ ತನ್ನ ಗೇಮ್ ಪ್ಲಾನ್ ಬಗ್ಗೆ ಕಾವ್ಯ ಮಾತನಾಡುತ್ತಾರೆ. ಈ ವೇಳೆ, ನಾನು ಪರ್ಫಾರ್ಮೆನ್ಸ್ ಅಷ್ಟೇ ಕನ್ಸಿಡರ್ ಮಾಡ್ತೀನಿ. ಫ್ರೆಂಡ್‌ಶಿಪ್ ಎಲ್ಲ ನೋ.. ಉಳಿದವರಂತೆ ನಾನು ಕೂಡ ಪ್ರಾಕ್ಟಿಕಲ್ ಆಗಿ ಆಡ್ತೀನಿ ಅಂತ ಕಾವ್ಯ ಹೇಳ್ತಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೇಲಿ ಅಶ್ವಿನಿ ಸೈಲೆಂಟ್.. ಧ್ರುವಂತ್ ವೈಲೆಂಟ್!
ಫ್ರೆಂಡ್‌ಶಿಪ್‌ಗಿಂತ ಪರ್ಫಾಮೆನ್ಸ್ ಮುಖ್ಯ. ಕಾವು ಹೀಗಂದಿದ್ದು ಯಾಕೆ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKSP pic.twitter.com/L3cBop7KSV
— Colors Kannada (@ColorsKannada) November 28, 2025
ಹಾಗಾದ್ರೆ, ನೀನೊಬ್ಬಳೆ ಬಿಗ್ ಬಾಸ್ ಕಪ್ ಗೆಲ್ಬೇಕು ಅಂತ ಡಿಸೈಡ್ ಮಾಡಿದ್ದೀಯಾ ಅಂತ ಉಗ್ರಂ ಮಂಜು ಕೇಳ್ತಾರೆ. ಅದಕ್ಕೆ ಕಾವ್ಯ, ನನಗೆ ಕಪ್‌ಗಿಂತ ಪರ್ಸನಾಲಿಟಿ ಮ್ಯಾಟರ್. ನನಗೆ ವಿಲ್ ಪವರ್ ಇದೆ. ಯಾವುದೇ ಕಾರಣಕ್ಕೂ ಬಿಟ್ಟುಕೊಡಲ್ಲ ಅಂತ ಹೇಳ್ತಾರೆ.
ಉಗ್ರಂ ಮಂಜು ಮತ್ತು ಕಾವ್ಯ ಮಾತುಕತೆ ವೇಳೆ ಗಿಲ್ಲಿ ಒಮ್ಮೆ ‘ಕಾವು’ ಅಂತ ಕೂಗ್ತಾರೆ. ಆದರೆ, ಗಿಲ್ಲಿ ಕಡೆ ಕಾವ್ಯ ಗಮನ ಕೊಡಲ್ಲ. ಹಾಗಾದ್ರೆ, ಕಾವ್ಯ ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಸೀರಿಯಸ್ ಆಗಿ ಆಟಕ್ಕಷ್ಟೇ ಗಮನ ಕೊಡ್ತಾರಾ? ಗಿಲ್ಲಿ ಜೊತೆಗಿನ ಫ್ರೆಂಡ್‌ಶಿಪ್‌ಗೆ ಬ್ರೇಕ್ ಹಾಡ್ತಾರಾ? ಏನು ಮಾಡ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಬಿಗ್‌ಬಾಸ್ ಮನೆಯ ಅತಿಥಿಗಳ ಮನದಾಳದ ಮಾತು

