ನವದೆಹಲಿ: ಉತ್ತರ ಪ್ರದೇಶ (Uttar Pradesh) ಮತ್ತು ಮಹಾರಾಷ್ಟ್ರ (Maharashtra) ಸರ್ಕಾರಗಳು ಇನ್ನು ಮುಂದೆ ಆಧಾರ್ ಕಾರ್ಡ್‌ಗಳನ್ನು (Aadhaar Card) ಜನನ ಪ್ರಮಾಣ ಪತ್ರವಾಗಿ (Birth Certificate) ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸುವುದಿಲ್ಲ ಎಂದು ಘೋಷಿಸಿವೆ.
ಈ ಎರಡೂ ರಾಜ್ಯ ಸರ್ಕಾರಗಳು ಆಧಾರ್ ಅನ್ನು ಅಧಿಕೃತ ಜನನ ದಾಖಲೆಯಾಗಿ ಪರಿಗಣಿಸುವುದನ್ನು ನಿಲ್ಲಿಸುವಂತೆ ಇಲಾಖೆಗಳಿಗೆ ಅಧಿಕೃತ ಆದೇಶ ಹೊರಡಿಸಿವೆ.
ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ, 2023 ರ ನಂತರ ಆಧಾರ್ ಅನ್ನು ಏಕೈಕ ಪುರಾವೆಯಾಗಿ ಬಳಸಿಕೊಂಡು ಮಾಡಲಾದ ಎಲ್ಲಾ ಜನನ ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ವರದಿಯಾಗಿದೆ.
ಆಧಾರ್ ಆಸ್ಪತ್ರೆ ಅಥವಾ ಜನನದ ಸರ್ಕಾರಿ ದಾಖಲೆಯಲ್ಲ. ಇದು ಮೂಲಭೂತ ಗುರುತಿನ ವಿವರಗಳನ್ನು ಮಾತ್ರ ತೋರಿಸುತ್ತದೆ. ಆದ್ದರಿಂದ ಜನನದ ಕಾನೂನು ಪುರಾವೆಯಾಗಿ ಬಳಸದಿರಲು ನಿರ್ಧರಿಸಲಾಗಿದೆ.
ಆಧಾರ್ ಅನ್ನು ಮಾತ್ರ ಬಳಸಿಕೊಂಡು ಜನನ ಪ್ರಮಾಣಪತ್ರಗಳನ್ನು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಗಳು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಡಿಸೆಂಬರ್ 4, 5 ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ
ಉತ್ತರ ಪ್ರದೇಶದಲ್ಲಿ ಯಾಕೆ?
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಕ್ರಮ ವಲಸಿಗರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಎಲ್ಲಾ ಜಿಲ್ಲೆಗಳಿಗೆ ಅಕ್ರಮ ವಲಸಿಗರನ್ನು ಗುರುತಿಸಿ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ವಿದೇಶಿಯರ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅವರನ್ನು ಬಂಧಿಸಲು ಪ್ರತಿ ಜಿಲ್ಲೆಯಲ್ಲಿ ತಾತ್ಕಾಲಿಕ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಕ್ರಮ ವಲಸಿಗರೆಂದು ಕಂಡುಬಂದವರನ್ನು ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಿ ಗಡೀಪಾರು ಮಾಡಲಾಗುತ್ತದೆ. ಇದನ್ನೂ ಓದಿ: ಸುದರ್ಶನ ಚಕ್ರ ನಮ್ಮ ರಕ್ಷಣಾ ಕೋಟೆಯೂ ಹೌದು, ಶತ್ರುಗಳ ಸಂಹಾರ ಅಸ್ತ್ರವೂ ಹೌದು – ಉಡುಪಿಯಲ್ಲಿ ಕೃಷ್ಣನ ಆಯುಧ ನೆನೆದ ಮೋದಿ!

