ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಮಹಿಳೆಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಕೊಲೆಯಾದ ವ್ಯಕ್ತಿ. ಸುರೇಶ್ ಮತ್ತು ಆತನ ಪತ್ನಿ ಮೂಲತಃ ಯಾದಗಿರಿಯವರು. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೀಗೆ ಇರಬೇಕಾದರೆ ಕೆಲಸ ಮಾಡುವ ಜಾಗದಲ್ಲಿ ವೀರಭದ್ರ ಎಂಬ ಯುವಕನ ಜೊತೆ ಲವ್ ಆಗಿದೆ. ಗಂಡನಿಗೆ ಗೊತ್ತಾಗದ ಹಾಗೆ ಇಬ್ಬರು ಆರೇಳು ತಿಂಗಳು ಏಕಾಂಗಿಯಾಗಿ ಕಾಲ ಕಳೆದಿದ್ದಾರೆ. ಒಂದು ದಿನ ಗಂಡನಿಗೆ ಅನುಮಾನ ಬಂದು ಚೆಕ್ ಮಾಡಿದಾಗ ಇಬ್ಬರು ರೆಡ್‌ಹ್ಯಾಂಡಾಗಿ ಲಾಕ್ ಆಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಯ ಹಳೆ ವಿಡಿಯೋ ಬಳಸಿ ವೈರಲ್ – ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲು
ಹೆಂಡತಿಗೆ ಬುದ್ದಿ ಹೇಳಿ ಗಂಡ ಸುಮ್ಮನಾಗಿದ್ದ. ಆದರೆ, ಈ ಇಬ್ಬರು ಸೇರಿ ಗಂಡನ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿಯೇ ಬಿಟ್ಟಿದ್ದರು. ಗಂಡ ಮನೆಯಲ್ಲಿದ್ದಾಗ ಪ್ರಿಯಕರಿನಿಗೆ ಕಾಲ್ ಮಾಡಿದ್ದಾಳೆ. ಇಬ್ಬರು ಹಲ್ಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ನಂತರ ನೇಣು ಬಿಗಿದು ಹತ್ಯೆ ಮಾಡಿದ್ದಾರೆ. ಆದಾದ ಬಳಿಕ ವೀರಭದ್ರನ ಗೆಳೆಯ ಅನಿಲ್ ಎಂಬವನಿಗೆ ಕಾಲ್ ಮಾಡಿ ಶವವನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಸಾಗಿಸಿ ಅಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ. ನಂತರ ಏನೂ ಗೊತ್ತಾಗದ ಹಾಗೆ ಮನೆಗೆ ಬಂದಿದ್ದಾರೆ.
ಮೂರು ದಿನಗಳ ನಂತರ ಮಹಿಳೆ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಳು. ಪೋಲಿಸರು ತನಿಖೆಗೆ ಇಳಿದಾಗ ಯಾವುದೇ ಸುಳಿವು ಸಿಗಲಿಲ್ಲ. ಸುಮಾರು ಮುನ್ನೂರು ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಕಾರಿನ ಓಡಾಟ ಸಿಕ್ಕಿದೆ. ಅದೇ ಆಧಾರದ ಮೇಲೆ ತನಿಖೆ ಮಾಡಿದಾಗ ಇಬ್ಬರು ಸೇರಿ ಕೊಲೆ ಮಾಡಿರೋದು ಗೊತ್ತಾಗಿದೆ. ಸದ್ಯ ಮೂವರನ್ನ ಮಾದನಾಯಕನಹಳ್ಳಿ ಪೋಲಿಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಪಾನ್‌ನಲ್ಲಿ ಸಲಿಂಗ ವಿವಾಹ ನಿಷೇಧ ಸಾಂವಿಧಾನಿಕ: ಟೋಕಿಯೊ ಕೋರ್ಟ್

