ಉಡುಪಿ: ಶ್ರೀ ಕೃಷ್ಣನ ಆಯುಧವಾದ ಸುದರ್ಶನ ಚಕ್ರದ ಹೆಸರಿನಲ್ಲಿ ಭಾರತದ ಸೇನೆಯ ಬತ್ತಳಿಕೆಯಲ್ಲಿರುವ ʻಮಿಷನ್ ಸುದರ್ಶನ ಚಕ್ರʼವನ್ನು (Mission Sudarshan Chakra) ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ. ಉಡುಪಿಯ (Udupi) ಶ್ರೀಕೃಷ್ಣ ಮಠದಲ್ಲಿ ಮಾತನಾಡಿದ ಅವರು, ಮಿಷನ್ ಸುದರ್ಶನ ಚಕ್ರ ನಮ್ಮ ರಕ್ಷಣೆಯ ಕೋಟೆಯೂ ಹೌದು ಎಂದಿದ್ದಾರೆ.
ಕೃಷ್ಣ ಗೀತೆಯ ಸಂದೇಶವನ್ನು ಯುದ್ದ ಭೂಮಿಯಲ್ಲಿ ಕೊಟ್ಟದ್ದು, ಅದು ಇಂದಿಗೂ ಪ್ರಸ್ತುತವಾಗಿದೆ. ಕೇಂದ್ರ ಸರ್ಕಾರದ ಪ್ರತೀ ಯೋಜನೆಯೂ ಶ್ರೀಕೃಷ್ಣನ ಶ್ಲೋಕದ ಪ್ರೇರಣೆಯಿಂದ ಆಗಿದೆ. ನಮಗೆ ಶಾಂತಿ ಸ್ಥಾಪನೆಯ ಜೊತೆಗೆ ಶಾಂತಿಯ ರಕ್ಷಣೆಯೂ ಗೊತ್ತಿದೆ. ಇದು ಹೊಸ ಭಾರತ, ನಾವು ಯಾರ ಮುಂದೆಯೂ ಬಗ್ಗಲ್ಲ, ಯಾರಿಗೂ ಜಗ್ಗಲ್ಲ. ಅಪರೇಷನ್ ಸಿಂಧೂರ್‌ನಲ್ಲಿ ಇಡೀ ದೇಶ ನಮ್ಮ ಬದ್ಧತೆಯನ್ನು ನೋಡಿದೆ. ಇದನ್ನೂ ಓದಿ: ಉಡುಪಿ | ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದು 4 ಸಂಕಲ್ಪಕ್ಕೆ ಕರೆ ಕೊಟ್ಟ ಮೋದಿ
ಒಂಭತ್ತು ಸಂಕಲ್ಪಗಳನ್ನು ಜನರು ಅಳವಡಿಸಿಕೊಳ್ಳಬೇಕು. ಇದು ವರ್ತಮಾನ ಹಾಗೂ ಭವಿಷ್ಯಗಳಿಗೆ ಬಹಳ ಮುಖ್ಯ. ಸಂತ ಸಮಾಜದ ಆಶೀರ್ವಾದ ಈ ಸಂಕಲ್ಪಕ್ಕೆ ದೊರೆತರೆ ಕೋಟ್ಯಂತರ ಜನರು ಇದನ್ನು ಅಳವಡಿಸಿಕೊಳ್ಳಲಿದ್ದಾರೆ. ನಮ್ಮ ಭಗವದ್ಗೀತೆಯ ಸಾರ ಲೋಕ ಕಲ್ಯಾಣದ ಕೆಲಸ ಮಾಡಿ ಎನ್ನುವುದಾಗಿದೆ ಎಂದು ತಿಳಿಸಿದ್ದಾರೆ.
ಕನಕದಾಸರಿಗೆ ನಮಿಸುವ ಪುಣ್ಯ ಇಂದು ನನಗೆ ಸಿಕ್ಕಿದೆ. ನನ್ನಂಥ ಎಲ್ಲಾ ಭಕ್ತರಿಗೂ (Devotees) ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಸಂಕಲ್ಪ ಮಾಡಲಾಗಿದೆ. ನಮ್ಮ ಮೊದಲ ಸಂಕಲ್ಪ ʻನೀರು ನದಿಯ ರಕ್ಷಿಸೋದುʼ ಆಗಲಿ. ಒಬ್ಬ ಬಡವನ ಉದ್ಧಾರ ಮಾಡಲು ಪ್ರಯತ್ನಿಸೋಣ. ಉತ್ತಮ ಆರೋಗ್ಯ, ಯೋಗ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು. ಇದನ್ನೂ ಓದಿ: ರಾಮಮಂದಿರ ಆಂದೋಲನದಲ್ಲಿ ಉಡುಪಿ ಜನರ ಪಾತ್ರ ದೇಶಕ್ಕೇ ಗೊತ್ತಿದೆ: ನರೇಂದ್ರ ಮೋದಿ

