ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಂಕ ಸಮರ ವಿಧಿಸಿದ್ದರೂ ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ (Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದೆ.
ಈ ಅವಧಿಯಲ್ಲಿ ಹಲವು ಸಂಸ್ಥೆಗಳು ಜಿಡಿಪಿ (GDP) 7% ರಷ್ಟು ಪ್ರಗತಿ ಸಾಧಿಸಬಹುದು ಎಂದು ಅಂದಾಜು ಮಾಡಿದ್ದವು. ಆದರೆ ಈ ನಿರೀಕ್ಷೆಗೂ ಮೀರಿ ಜಿಡಿಪಿ 8.2% ರಷ್ಟು ಪ್ರಗತಿ ಸಾಧಿಸಿದೆ. ಕಳೆದ ಹಣಕಾಸು ವರ್ಷದ ಈ ಅವಧಿಯಲ್ಲಿ 5.6% ಬೆಳವಣಿಗೆ ಸಾಧಿಸಿತ್ತು.
2023-24 ರ ನಾಲ್ಕನೇ ತ್ರೈಮಾಸಿಕದಲ್ಲಿ 9.5% ಜಿಡಿಪಿ ಬೆಳವಣಿಗೆ ದಾಖಲಿಸಿತ್ತು. ಆದಾದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ಈಗ ಸಾಧಿಸಿದೆ. ಇದನ್ನೂ ಓದಿ: Explained| ದಿಢೀರ್ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಅಮೆರಿಕದ ʼವರಿʼ ಏನು?
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ 48.63 ಲಕ್ಷ ಕೋಟಿ ರೂ.ಗಳಾಗಿದ್ದು ಒಂದು ವರ್ಷದ ಹಿಂದೆ ಈ ಅವಧಿಯಲ್ಲಿ 44.94 ಲಕ್ಷ ಕೋಟಿ ರೂ. ದಾಖಲಾಗಿತ್ತು. ಕೃಷಿ ಮಾತ್ರ 3.5% ಬೆಳವಣಿಗೆ ಸಾಧಿಸಿದೆ. ಅತಿವೃಷ್ಟಿ ಕಾರಣದಿಂದ ಕೃಷಿಯಲ್ಲಿ ಜಾಸ್ತಿ ಪ್ರಗತಿ ಕಂಡು ಬಂದಿಲ್ಲ.
ಯಾವ ವಲಯದ ಪಾಲು ಎಷ್ಟು?
ಉತ್ಪಾದನೆ 9.1%, ನಿರ್ಮಾಣ 8%, ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು 27%, ವ್ಯಾಪಾರ, ಹೋಟೆಲ್, ಸಾರಿಗೆ ಇತ್ಯಾದಿಗಳು 17%, ವಿದ್ಯುತ್, ನೀರು ಇತ್ಯಾದಿ 3%, ಗಣಿಗಾರಿಕೆ 1%, ಕೃಷಿ ಅರಣ್ಯ, ಮೀನುಗಾರಿಕೆ 14%, ಸಾರ್ವಜನಿಕ ಆಡಳಿತ, ರಕ್ಷಣೆ ಇತ್ಯಾದಿ ಸೇವೆಗಳು 16%
The 8.2% GDP growth in Q2 of 2025-26 is very encouraging. It reflects the impact of our pro-growth policies and reforms. It also reflects the hard work and enterprise of our people. Our government will continue to advance reforms and strengthen Ease of Living for every citizen.
— Narendra Modi (@narendramodi) November 28, 2025
ಮೋದಿ ಮೆಚ್ಚುಗೆ:
2025-26ರ ಎರಡನೇ ತ್ರೈಮಾಸಿಕದಲ್ಲಿ 8.2% ರಷ್ಟು ಜಿಡಿಪಿ ಬೆಳವಣಿಗೆ ತುಂಬಾ ಉತ್ತೇಜನಕಾರಿಯಾಗಿದೆ. ಇದು ನಮ್ಮ ಬೆಳವಣಿಗೆಯ ಪರ ನೀತಿಗಳು ಮತ್ತು ಸುಧಾರಣೆಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮ ಜನರ ಕಠಿಣ ಪರಿಶ್ರಮ ಮತ್ತು ಉದ್ಯಮಶೀಲತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ (Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಎಸ್‌ಟಿ ಇಳಿಕೆ- ಜಿಡಿಪಿ ಏರಿಕೆ:
2017 ರಲ್ಲಿ ಜಾರಿಗೆ ಬಂದ ಜಿಎಸ್‌ಟಿಯಲ್ಲಿ 4 ಸ್ಲ್ಯಾಬ್‌ಗಳಿದ್ದವು. 5%, 12%, 18%, 28% ಸ್ಲ್ಯಾಬ್‌ಗಳಿದ್ದವು. ಈ ಸ್ಲ್ಯಾಬ್‌ಗಳ ಪೈಕಿ 12% ಮತ್ತು 28% ಸ್ಲ್ಯಾಬ್‌ಗಳನ್ನು ತೆಗೆದು ಹಾಕಲಾಗಿದೆ. ಈ ಸ್ಲ್ಯಾಬ್‌ನಲ್ಲಿರುವ ವಸ್ತುಗಳನ್ನು 5% ಮತ್ತು 18% ಸ್ಲ್ಯಾಬ್‌ಗೆ ಶಿಫ್ಟ್ ಮಾಡಲಾಗಿದೆ. ದರ ಕಡಿತದಿಂದಾಗಿ ಆರ್ಥಿಕತೆ ಬೂಸ್ಟ್ ಸಿಕ್ಕಿದ್ದರಿಂದ ಜಿಡಿಪಿ ಏರಿಕೆ ಕಂಡಿದೆ.


