– 600ಕ್ಕೂ ಹೆಚ್ಚು ಮನೆಗಳಿಗೆ ತೀವ್ರ ಹಾನಿ
ಕೊಲಂಬೊ: ಶ್ರೀಲಂಕಾದಲ್ಲಿ (Sri Lanka) ಸುರಿಯುತ್ತಿರುವ ನಿರಂತರ ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರೊಂದಿಗೆ ಅಲ್ಲಲ್ಲಿ ಭೂಕುಸಿತಗಳೂ (Landslides) ಸಂಭವಿಸಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ನಿರಂತರ ಮಳೆಯಿಂದಾಗಿ ಮನೆಗಳು, ಹೊಲಗಳು, ರಸ್ತೆಗಳು ಜಲಾವೃತವಾಗಿದ್ದು, ಭೂಕುಸಿತ ಸಂಭವಿಸಿದೆ. ಇದುವರೆಗೆ 600ಕ್ಕೂ ಹೆಚ್ಚು ಮನೆಗಳು ತೀವ್ರ ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಶುಕ್ರವಾರ (ಇಂದು) ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ಶ್ರೀಲಂಕಾ ಸರ್ಕಾರ (Sri Lanka Govt) ರಜೆ ಘೋಷಣೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ವಾತಾವರಣ ಮುಂದುವರಿದರೆ, ಬಂದ್ ಮುಂದುವರಿಯಲಿದೆ ಎಂಬುದಾಗಿಯೂ ಹೇಳಿದ್ದಾರೆ. ಇದನ್ನೂ ಓದಿ: ಶ್ವೇತಭವನದ ಬಳಿ ಗುಂಡಿನ ದಾಳಿ – ಓರ್ವ ಭದ್ರತಾ ಸಿಬ್ಬಂದಿ ಸಾವು: ಟ್ರಂಪ್ ಘೋಷಣೆ
ರಾಜಧಾನಿ ಕೊಲಂಬೊದಿಂದ ಸುಮಾರು 300 ಕಿಲೋಮೀಟರ್ ಪೂರ್ವಕ್ಕೆ ಇರುವ ಬದುಲ್ಲಾ ಮತ್ತು ನುವಾರ ಎಲಿಯಾ ಕೇಂದ್ರ ಚಹಾ ಬೆಳೆಯುವ ಪ್ರದೇಶಗಳಲ್ಲಿ ಉಂಟಾದ ಭೂಕುಸಿತದಲ್ಲಿ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, 21 ಜನ ಕಾಣೆಯಾಗಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
ಮತ್ತೊಂದು ಕಡೆ ರಕ್ಷಣಾ ತಂಡಗಳು ಭರದ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: Hong Kong Fire | ಸಾವಿನ ಸಂಖ್ಯೆ 94ಕ್ಕೆ ಏರಿಕೆ – 200ಕ್ಕೂ ಅಧಿಕ ಮಂದಿ ಮಿಸ್ಸಿಂಗ್


