ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಮೋದಿ ಆಗಮನ

ಮೋದಿ ನೋಡಲು ಜನರ ಜಮಾವಣೆ

ಉಡುಪಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ
ಉಡುಪಿಯ ಎರಡು ರಸ್ತೆಗಳಲ್ಲಿ ನಿಂತಿರುವ ಸಾವಿರಾರು ಮಂದಿ
ಮೋದಿಯವರ ಮುಖವಾಡ, ಕೇಸರಿ ಟೋಪಿ, ಕೇಸರಿ ಶಾಲು ಹಾಕಿಕೊಂಡು ನಿಂತಿರುವ ಸಾವಿರಾರು ಮಂದಿ
ಉಡುಪಿಯ ಸಿಟಿ ಬಸ್ ನಿಲ್ದಾಣ ರಸ್ತೆಯಲ್ಲಿ ಸಾಗಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ ರೋಡ್ ಶೋ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ
ಮಂಗಳೂರಿನ ಬಜಪೆಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಸೇನಾ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ
ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿರೋ ಮೋದಿ
ಮೋದಿ ಕಾರ್ಯಕ್ರಮ ಏನೇನು?
ಬೆ.11:05ಕ್ಕೆ – ಮಂಗಳೂರು ಏರ್‌ಪೋರ್ಟ್ಗೆ ಮೋದಿ ಆಗಮನ
ಬೆ.11:35 – ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಹೆಲಿಪ್ಯಾಡ್‌ಗೆ ಆಗಮನ
ಉಡುಪಿಯ ರಥಬೀದಿಯಲ್ಲಿ ಮೋದಿ 2 ಕಿ.ಮೀ ರೋಡ್ ಶೋ
ಚಿನ್ನದ ಕವಚ ಅಳವಡಿಸಿರುವ ಕನಕನ ಕಿಂಡಿ ಲೋಕಾರ್ಪಣೆ
ಸ್ವರ್ಣ ಖಚಿತ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣದೇವರ ದರ್ಶನ
ಅಷ್ಟಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಮಠದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ
ಗೀತಾ ಮಂದಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ
ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ
ಗೀತಾ ಮಂದಿರದಲ್ಲೇ ಲಘು ಉಪಹಾರ ಸ್ವೀಕಾರ
ಮೋದಿಗಾಗಿ ತುಳುನಾಡಿನ ತಿಂಡಿಗಳ ಸಿದ್ಧತೆ
ಲಕ್ಷ ಕಂಠ ಭಗವದ್ಗೀತಾ ಸಮಾವೇಶದಲ್ಲಿ ಪ್ರಧಾನಿ ಭಾಗಿ
ನೆಲದ ಮೇಲೆ ಅಸೀನರಾಗಲಿರುವ ಪ್ರಧಾನಿ ಮೋದಿ
ಭಗವದ್ಗೀತೆಯ 10 ಶ್ಲೋಕಗಳ ಪಠಣ ಮಾಡಲಿರುವ ಮೋದಿ
ಉಡುಪಿ ಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ
ಕೃಷ್ಣ ಮಠದ ಆವರಣದಲ್ಲಿ ಪಾರಾಯಣ ಪ್ರಕ್ರಿಯೆ ಆರಂಭ
ಭಗವದ್ಗೀತೆಯ 18 ಅಧ್ಯಾಯಗಳನ್ನು ಪಠಿಸಲಿರುವ ಭಕ್ತರು
ಮಧ್ಯಾಹ್ನ 12 .15ರ ಸುಮಾರಿಗೆ ಸಭಾಂಗಣಕ್ಕೆ ಆಗಮಿಸಲಿರುವ ನರೇಂದ್ರ ಮೋದಿ
15ನೇ ಅಧ್ಯಾಯ ಪುರುಷೋತ್ತಮ ಸೂಕ್ತ ಪಠಿಸಲಿರುವ ಮೋದಿ
ಸುಮಾರು 18 ಸಾವಿರ ಜನ ಭಗವದ್ಗೀತೆ ಸಮಾವೇಶದಲ್ಲಿ ಭಾಗಿ

ಪರ್ಯಾಯ ಪುತ್ತಿಗೆಮಠ ಹಾಗೂ ಶ್ರೀಕೃಷ್ಣಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಗೆ ಆಗಮಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

