ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅಧಿಕಾರ ಹಂಚಿಕೆ ಹಣಾಹಣಿ ಕಾಂಗ್ರೆಸ್ ಹೈಕಮಾಂಡ್‌ಗೆ (Congress High Command) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದೆಹಲಿ ಅಂಗಳದಲ್ಲಿ ಕರ್ನಾಟಕ ಪಾಲಿಟಿಕ್ಸ್ (Karnataka Politics) ಚರ್ಚೆ ಜೋರಾಗಿದೆ.
ಇದರ ಮಧ್ಯೆ ಎಕ್ಸ್‌ನಲ್ಲಿ ಡಿಕೆ ಶಿವಕುಮಾರ್ (DK Shivakumar) ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ ಎಂದು ಪೋಸ್ಟ್ ಮಾಡಿ ಸಿಎಂಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೌಂಟರ್ ಎಂಬಂತೆ ಕರ್ನಾಟಕಕ್ಕೆ ನಮ್ಮ ಮಾತು ಇದು ಘೋಷಣೆಯಲ್ಲ. ನಮಗೆ ಇದು ಜಗತ್ತನ್ನು ಅರ್ಥೈಸುತ್ತೆ ಎಂದು ಪೋಸ್ಟ್ ಮಾಡಿದ್ದಾರೆ.
ಈಗಾಗಲೇ ಸಿಎಂ ಎರಡೂವರೆ ವರ್ಷ ಅಧಿಕಾರ ಪೂರೈಸಿದ್ದಾರೆ. ಕೊಟ್ಟ ಮಾತಿನಂತೆ ಬಾಕಿ ಉಳಿದ ಎರಡೂವರೆ ವರ್ಷದ ಅವಧಿ ಬಿಟ್ಟು ಕೊಡಬೇಕೆಂಬುದು ಡಿಕೆಶಿ ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್ ಮುಂದೆ ಇಬ್ಬರೂ ನಾಯಕರು ತಮ್ಮ ತಮ್ಮ ವಾದ ಮಂಡನೆಗೆ ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ಸಿಕ್ಕಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕ್ಯಾಂಪ್‌ನಿಂದ 6 ಸಚಿವರ ದೆಹಲಿ ದಂಡಯಾತ್ರೆ
ಸಿಎಂ ವಾದವೇನು?
ಬಜೆಟ್ ತನಕ ಯಾವುದೇ ಮಾತುಕತೆ ಬೇಡ. ಆಗಿನ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿ ಬೇರೆಯಾಗಿದೆ. ಶಾಸಕರ ಅಭಿಪ್ರಾಯಗಳನ್ನೂ ಪಡೆದು ನಿರ್ಧಾರ ತೆಗೆದುಕೊಳ್ಳಿ. ಯಾವುದೇ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ಯಥಾಸ್ಥಿತಿ ಹೀಗೆಯೇ ಮುಂದುವರಿಯಲಿ. ಎರಡ್ಮೂರು ತಿಂಗಳು ಸಮಯ ತೆಗೆದುಕೊಂಡು ನಿರ್ಧಾರ ಕೈಗೊಳ್ಳಿ. ಇದನ್ನೂ ಓದಿ: ಒಕ್ಕಲಿಗ ನಾಯಕರಾಗಿ ಬೇಡ, ಡಿಕೆಶಿ ಅವಶ್ಯಕತೆ ಪಕ್ಷಕ್ಕಿದ್ರೇ ಸಿಎಂ ಪಟ್ಟ ಕೊಡಬೇಕು – ಕೆಂಚಪ್ಪ ಗೌಡ
ಡಿಕೆಶಿ ವಾದ ಏನು?
ಕೊಟ್ಟ ಮಾತು ಉಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಮುಂದೆ ಆಗಿರುವ ಒಪ್ಪಂದ ಕ್ಲೀಯರ್ ಆಗಬೇಕು. ಬಜೆಟ್ ವರೆಗೆ ಕಾಯಲು ಸಾಧ್ಯವಿಲ್ಲ. ಬೇಕಿದ್ದರೆ ಜನವರಿ 14ರ ವರೆಗೆ ಸಮಯ ಕೊಡಿ. ಶಾಸಕರ ಅಭಿಪ್ರಾಯಗಳನ್ನೂ ಪಡೆಯಿರಿ.

