ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಮೆಗಾ ಹರಾಜು ಇಂದು (ನ.27) ದೆಹಲಿಯಲ್ಲಿ ಆರಂಭಗೊಂಡಿದೆ. ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ಯುಪಿ ವಾರಿಯರ್ಸ್ ನಡುವಿನ ಭಾರೀ ಪೈಪೋಟಿ ಬಳಿಕ ಭಾರತದ ಆಲ್-ರೌಂಡರ್ ದೀಪ್ತಿ ಶರ್ಮಾರನ್ನು ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಿ 3.2 ಕೋಟಿ ರೂ.ಗೆ ಉತ್ತರ ಪ್ರದೇಶ ವಾರಿಯರ್ಸ್ ತಂಡ ಉಳಿಸಿಕೊಂಡಿತು.
ರಾಯಲ್ ಚಾಲೆಂಜರ್ಸ್ ಮಹಿಳಾ ತಂಡ ಎಡಗೈ ಸ್ಪಿನ್ನರ್ ರಾಧಾ ಯಾದವ್ 65 ಲಕ್ಷ ರೂ.ಗೆ ಖರೀದಿಸಿತು. ಅವರಿಗೆ 30 ಲಕ್ಷ ರೂ. ನಿಗದಿಯಾಗಿತ್ತು. ಇನ್ನುಳಿದಂತೆ 40 ಲಕ್ಷ ರೂ ಮೂಲಧನ ಇದ್ದ ಜಾರ್ಜಿಯಾ ವೊಲ್ ಅವರನ್ನು 60 ಲಕ್ಷ ರೂ.ಗೆ, ನಾಡಿನ್ ಡಿ ಕ್ಲಾರ್ಕ್ ಅವರನ್ನು 65 ಲಕ್ಷ ರೂ., ಲಾರೆನ್ ಬೆಲ್ 90 ಲಕ್ಷ ರೂ, ಲಿನ್ಸಿ ಸ್ಮಿತ್ 30 ಲಕ್ಷ ರೂ. ಕೊಟ್ಟು ಖರೀದಿಸಿತು. ಇವರೆಲ್ಲರಿಗೂ 30 ಲಕ್ಷ ರೂ ಮೂಲಬೆಲೆ ನಿಗದಿಯಾಗಿತ್ತು.

ಆರ್ ಸಿಬಿಯು ಸ್ಮೃತಿ ಮಂದಾನ (3.5 ಕೋಟಿ ರೂ.), ರಿಚಾ ಘೋಷ್ (2.4 ಕೋಟಿ ರೂ.), ಎಲಿಸ್ ಪೆರ್ರಿ (2 ಕೋಟಿ ರೂ.) ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ (60 ಲಕ್ಷ ರೂ.) ಹೀಗೆ 9.85 ಕೋಟಿ ರೂ. ವೆಚ್ಚ ಮಾಡಿ ಐವರನ್ನು ರಿಟೈನ್ ಮಾಡಿಕೊಂಡಿತ್ತು. ಇನ್ನೂ ಉಳಿದ 6.15 ಕೋಟಿ ರೂ.ನಲ್ಲಿ ಇಂದು ನಡೆದ ಹರಾಜಿನಲ್ಲಿ 3.3 ಕೋಟಿ ರೂ. ಖರ್ಚು ಮಾಡಿದೆ. ಇನ್ನೂ 2.85 ಕೋಟಿ ರೂ. ಉಳಿದಿದೆ. ಅದರಲ್ಲಿ ಗರಿಷ್ಠ 8 ಮಂದಿಯನ್ನು ಕೊಂಡುಕೊಳ್ಳಬಹುದಾಗಿದೆ. ಕಲಬುರಗಿಯ ಸೇಡಂ ತಾಲೂಕಿನ ಕೋಲಕುಂದಾ ಗಡಿ ಗ್ರಾಮದ ಮಮತಾ ಮಡಿವಾಳ ದೆಹಲಿ ತಂಡಕ್ಕೆ 10 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ.
ದೀಪ್ತಿ ಶರ್ಮಾ(3 ಕೋಟಿ ರೂ.), ಸೋಫಿ ಡಿವೈನ್ (2 ಕೋಟಿ ರೂ.) ಮತ್ತು ಮೆಗ್ ಲ್ಯಾನಿಂಗ್ (1.9 ಕೋಟಿ ರೂ.) ಬೃಹತ್ ಮೊತ್ತಕ್ಕೆ ಮಾರಾಟವಾದರು. ನ್ಯೂಜಿಲೆಂಡ್‌ನ ಅನುಭವಿ ಆಟಗಾರ್ತಿ ಸೋಫಿ ಡಿವೈನ್ 2 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ ತಂಡವನ್ನು ಸೇರಿಕೊಂಡರು. ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್ RTM ಬಳಸಿ ಉಳಿಸಿಕೊಂಡಿತು. ಆಸ್ಟ್ಟ್ರೇಲಿಯಾ ಆಟಗಾರ್ತಿ ಅಲಿಸಾ ಎಲಿಯವರನ್ನು ಯಾವ ತಂಡವೂ ಖರೀದಿಸಲು ಆಸಕ್ತಿ ತೋರಲಿಲ್ಲ.
WPL 2026ರ 4ನೇ ಆವೃತ್ತಿ ಜ.9ರಂದು ಆರಂಭವಾಗಲಿದ್ದು ಫೆಬ್ರವರಿ 5ರವರೆಗೆ ನಡೆಯಲಿವೆ. ನವಿ ಮುಂಬೈ ಡಿವೈ ಕ್ರೀಡಾಂಗಣ ಮತ್ತು ವಡೋದರಾ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಫೆಬ್ರವರಿ 5ರಂದು ಫೈನಲ್ ನಡೆಯಲಿದೆ.
ಯಾರು ಯಾವ ತಂಡಕ್ಕೆ? – ಯಾರಿಗೆ ಎಷ್ಟು ಮೊತ್ತ?
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಲಾರೆನ್ ಬೆಲ್ – 90 ಲಕ್ಷ ರೂ
ಪೂಜಾ ವಸ್ತ್ರಾಕರ್ – 85 ಲಕ್ಷ ರೂ
ಅರುಂಧತಿ ರೆಡ್ಡಿ – 75 ಲಕ್ಷ ರೂ
ರಾಧಾ ಯಾದವ್ – 65 ಲಕ್ಷ ರೂ
ಗ್ರೇಸ್ ಹ್ಯಾರಿಸ್ – 75 ಲಕ್ಷ ರೂ
ನಡಿನ್ ಡಿ ಕ್ಲರ್ಕ್ – 65 ಲಕ್ಷ ರೂ
ಜಾರ್ಜಿಯಾ ವೋಲ್ – 60 ಲಕ್ಷ ರೂ
ಲಿನ್ಸೆ ಸ್ಮಿತ್ – 30 ಲಕ್ಷ ರೂ
ಪ್ರೇಮಾ ರಾವತ್ – 20 ಲಕ್ಷ ರೂ
ಯುಪಿ ವಾರಿಯರ್ಸ್
ದೀಪ್ತಿ ಶರ್ಮಾ – 3.2 ಕೋಟಿ ರೂ
ಶಿಖಾ ಪಾಂಡೆ – 2.4 ಕೋಟಿ ರೂ
ಮೆಗ್ ಲ್ಯಾನಿಂಗ್ – 1.9 ಕೋಟಿ
ಫೋಬೆ ಲಿಚ್‌ಫೀಲ್ಡ್ – 1.2 ಕೋಟಿ ರೂ
ಆಶಾ ಶೋಭನಾ 1.1 ಕೋಟಿ
ಸೋಫಿ ಎಕ್ಲೆಸ್ಟೋನ್ – 85 ಲಕ್ಷ ರೂ
ದ್ಯಾಂಡ್ರಾ ಡಾಟಿನ್ – 80 ಲಕ್ಷ ರೂ
ಹರ್ಲೀನ್ ಡಿಯೋಲ್ – 50 ಲಕ್ಷ ರೂ
ಕ್ರಾಂತಿಗೌಡ – 50 ಲಕ್ಷ ರೂ
ಕ್ಲೋಯ್ ಟ್ರಯಾನ್ – 30 ಲಕ್ಷ ರೂ
ಶಿಪ್ರಾ ಗಿರಿ – 10 ಲಕ್ಷ ರೂ
ಸಿಮ್ರಾನ್ ಶೇಖ್ – 10 ಲಕ್ಷ ರೂ
ತಾರಾ ನಾರ್ರಿಸ್ – 10 ಲಕ್ಷ ರೂ
ಗುಜರಾತ್ ಜೈಂಟ್ಸ್
ಸೋಫಿ ಡಿವೈನ್ – 2 ಕೋಟಿ ರೂ
ಜಾರ್ಜಿಯಾ ವೇರ್‌ಹ್ಯಾಮ್ – 1 ಕೋಟಿ ರೂ
ಭಾರತಿ ಫುಲ್ಮಾಲಿ – 70 ಲಕ್ಷ ರೂ
ಕಾಶ್ವೀ ಗೌತಮ್ – 65 ಲಕ್ಷ ರೂ
ರೇಣುಕಾ ಸಿಂಗ್ – 60 ಲಕ್ಷ ರೂ
ಕಿಮ್ ಗಾರ್ತ್ – 50 ರೂ ಲಕ್ಷ
ಯಾಸ್ತಿಕಾ ಭಾಟಿಯಾ – 50 ಲಕ್ಷ ರೂ
ತನುಜಾ ಕನ್ವರ್ – 45 ಲಕ್ಷ ರೂ
ಅನುಷ್ಕಾ ಶರ್ಮಾ – 45 ಲಕ್ಷ ರೂ
ಟಿಟಾಸ್ ಸಾಧು – 30 ಲಕ್ಷ ರೂ
ಕನಿಕಾ ಅಹುಜಾ – 30 ಲಕ್ಷ ರೂ
ಸಂತೋಷ ಕುಮಾರಿ – 10 ಲಕ್ಷ ರೂ
ಶಿವಾನಿ ಸಿಂಗ್ – 10 ಲಕ್ಷ ರೂ
ಡೆಲ್ಲಿ ಕ್ಯಾಪಿಟಲ್ಸ್
ಶ್ರೀ ಚರಣಿ – 1.3 ಕೋಟಿ ರೂ
ಚಾನೆಲ್ ಹೆನ್ರಿ – 1.3 ಕೋಟಿ ರೂ
ಲಾರಾ ವೊಲ್ವಾರ್ಡ್ – 1.1 ಕೋಟಿ ರೂ
ಸ್ನೇಹ ರಾಣಾ – 50 ಲಕ್ಷ ರೂ
ತನಿಯಾ ಭಾಟಿಯಾ – 30 ಲಕ್ಷ ರೂ
ಲಿಜೆಲ್ ಲೀ – 30 ಲಕ್ಷ ರೂ
ನಂದಿನಿ ಶರ್ಮಾ – 20 ಲಕ್ಷ ರೂ
ದೀಯಾ ಯಾದವ್ – 10 ಲಕ್ಷ ರೂ
ಮಮತಾ ಮಡಿವಾಳ – 10 ಲಕ್ಷ ರೂ
ಲೂಸಿ ಹ್ಯಾಮಿಲ್ಟನ್ – 10 ಲಕ್ಷ ರೂ
ಮುಂಬೈ ಇಂಡಿಯನ್ಸ್
ಅಮೆಲಿಯಾ ಕೆರ್ – 3 ಕೋಟಿ ರೂ
ಸಜೀವನ್ ಸಜನಾ – 75 ಲಕ್ಷ ರೂ
ಶಬ್ನಿಮ್ ಇಸ್ಮಾಯಿಲ್ – 60 ಲಕ್ಷ ರೂ
ನಿಕೋಲಾ ಕ್ಯಾರಿ – 30 ಲಕ್ಷ ರೂ
ಸಂಸ್ಕೃತಿ ಗುಪ್ತಾ – 20 ಲಕ್ಷ ರೂ
ರಾಹಿಲಾ ಫಿರ್ದೌಸ್ – 10 ಲಕ್ಷ ರೂ
ಪೂನಂ ಖೇಮ್ನಾರ್ – 10 ಲಕ್ಷ ರೂ

