ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಅವರ ನಟನೆಯ ಸಿನಿಮಾಗಳು ಸಾಲು ಸಾಲು ಸೋಲು ಕಾಣುತ್ತಿವೆ. ಆಂಧ್ರದ ಡಿಸಿಎಂ (DCM) ಆದ ಬಳಿಕ ಅವರ ಚಿತ್ರಗಳು ಹಿಟ್‌ಲಿಸ್ಟ್ ಸೇರುತ್ತಿಲ್ಲ. ಹೀಗಾಗಿ ಅವರ ಅಭಿಮಾನಿ ಬಳಗಕ್ಕೆ ಸಹಜವಾಗಿಯೇ ಬೇಸರ ಮೂಡಿಸಿದೆ. ಇದೇ ವರ್ಷ 2025ರಲ್ಲಿ ಪವನ್ ಕಲ್ಯಾಣ್ ನಟನೆಯ ಹರಿಹರ ವೀರಮಲ್ಲು (Hari Hara Veera Mallu) ಸಿನಿಮಾ ಹಾಗೂ ಓಜಿ (OG) ಸಿನಿಮಾ ಎರಡೂ ತೆರೆಕಂಡಿವೆ. ಆದರೆ ಸಿನಿಮಾ ತೆರೆಕಂಡಾಗ ಬಂದ ರೆಸ್ಪಾನ್ಸ್ ಜಾಸ್ತಿ ದಿನ ಉಳಿಯಲಿಲ್ಲ.
ಪವನ್ ಕಲ್ಯಾಣ್ ರಾಜಕೀಯದಲ್ಲೇ ತಮ್ಮನ್ನ ತಾವು ತೊಡಗಿಸಿಕೊಂಡ ಹಿನ್ನೆಲೆ ಸಿನಿಮಾಗಳತ್ತ ಗಮನಹರಿಸಲು ಆಗುತ್ತಿಲ್ಲ. ಹೀಗಾಗಿ ಒಂದಾದ ಮೇಲೆ ಒಂದರಂತೆ ಸಿನಿಮಾಗಳು ಕೈಕೊಡುತ್ತಿವೆ. ಪವನ್‌ಕಲ್ಯಾಣ್ ಇತನ್ಮಧ್ಯೆ ಓಜಿ ಸಿನಿಮಾದ ಪಾರ್ಟ್-2 ಕೂಡಾ ಶೂಟಿಂಗ್ ಅರ್ಧಕ್ಕೆ ನಿಂತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಟಾಲಿವುಡ್ ಅಂಗಳದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿವೆ. ಇದನ್ನೂ ಓದಿ: `He Was Everything To Me’ ಕೊನೆಗೂ ಮೌನಮುರಿದ ಹೇಮಾಮಾಲಿನಿ – ಧರ್ಮೇಂದ್ರ ಸಾವಿನ ಬಗ್ಗೆ ಭಾವುಕ ಪೋಸ್ಟ್
ಓಜಿ ಸಿನಿಮಾವನ್ನು ನಿರ್ಮಾಣ ಮಾಡಿದ ಡಿವಿವಿ ದಾನಯ್ಯ ಪಾರ್ಟ್-2 ಸಿನಿಮಾ ನಿರ್ಮಾಣ ಮಾಡಲು ಹಿಂಜರಿಯುತ್ತಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಅಂದುಕೊಂಡಂತೆ ಆಗಿದ್ದರೆ ಓಜಿ ಪಾರ್ಟ್ 2 ಸಿನಿಮಾದ ಶೂಟಿಂಗ್ ಪ್ರಾರಂಭವಾಗುವುದಕ್ಕೆ ಸಿದ್ಧತೆಗಳು ನಡೆಯಬೇಕಾಗಿತ್ತು. ಆದರೆ ಯಾವುದೇ ಸಿದ್ಧತೆಗಳು ನಡೆಯದ ಕಾರಣ ಹೀಗೊಂದು ವದಂತಿ ಹಬ್ಬಿದೆ.
ಪವನ್ ಕಲ್ಯಾಣ್ ಅವರ ಓಜಿ ಪಾರ್ಟ್-2 ಸಿನಿಮಾ ಎಲ್ಲಾ ಸರ್ಕಸ್ ಮಾಡಿ ಶೂಟಿಂಗ್ ಪ್ರಾರಂಭ ಮಾಡಿದರೂ ಸಹ ತುಂಬಾ ಟೈಂ ಕೂಡಾ ಬೇಕಾಗುತ್ತೆ. ಯಾಕಂದ್ರೆ ಪವನ್ ಕಲ್ಯಾಣ್ ರಾಜಕೀಯದಲ್ಲಿ ಸಕ್ರೀಯರಾದ ಕಾರಣ ಸಿನಿಮಾ ಮುಗಿಯೋಕೆ ತಡವಾಗುತ್ತೆ. ಇದೆಲ್ಲ ಕಾರಣದಿಂದ ಸಿನಿಮಾವನ್ನು ನಿಲ್ಲಿಸೋದೆ ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ನಿರ್ಮಾಪಕರು ಎನ್ನಲಾಗುತ್ತಿದೆ.

