ನವದೆಹಲಿ: 2014 ರ ಲೋಕಸಭಾ ಚುನಾವಣೆಯಲ್ಲಿ (Lok Sabaha Election) ಕಾಂಗ್ರೆಸ್ (Congress) ಸೋಲಿಗೆ ಅಮೆರಿಕ ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳಾದ ಸಿಐಎ (CIA) ಮತ್ತು ಮೊಸಾದ್ (Mossad) ಕಾರಣ ಎಂದು ಕಾಂಗ್ರೆಸ್ ನಾಯಕ ಕುಮಾರ್ ಕೇತ್ಕರ್ ಶಾಕಿಂಗ್ ಆರೋಪ ಮಾಡಿದ್ದಾರೆ.
ಸಂವಿಧಾನ ದಿನದಂದು ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಕುಮಾರ್ ಕೇತ್ಕರ್ (Kumar Ketkar) ವಿದೇಶಿ ಗುಪ್ತಚರ ಸಂಸ್ಥೆಗಳಿಂದಾಗಿ ಚುನಾವಣೆಯಲ್ಲಿ ನಮಗೆ ಸೋಲಾಗಿದೆ ಎಂದು ದೂರಿದ್ದಾರೆ.
ಪಕ್ಷವು 2004ರ ಲೋಕಸಭಾ ಚುನಾವಣೆಯಲ್ಲಿ 145 ಸ್ಥಾನಗಳನ್ನು ಮತ್ತು ಐದು ವರ್ಷಗಳ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೇ ಟ್ರೆಂಡ್ ಮುಂದುವರಿದಿದ್ದರೆ ಕಾಂಗ್ರೆಸ್ 250 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ 2014 ರಲ್ಲಿ ಈ ಸಂಖ್ಯೆ 44ಕ್ಕೆ ಇಳಿಯಿತು ಎಂದರು.
VIDEO | Congress leader Kumar Ketkar on Wednesday claimed that the CIA and the Mossad, the spy agencies of the United States and Israel respectively, had plotted the defeat of the Congress in the 2014 Lok Sabha polls.
Speaking at an event organised by the Congress on the… pic.twitter.com/gDrrlDs5Dx
— Press Trust of India (@PTI_News) November 27, 2025
2014ರ ಚುನಾವಣೆಯಲ್ಲಿ ಕಾಂಗ್ರೆಸ್ 206 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ಪಡೆದರೆ ನಮಗೆ ಭಾರತದಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಆರಿತು ವಿದೇಶಿ ಗುಪ್ತಚರ ಸಂಸ್ಥೆಗಳು ಇಲ್ಲಿ ಆಟವಾಡಿದವು ಎಂದು ದೂರಿದರು. ಇದನ್ನೂ ಓದಿ: ಕೊಟ್ಟ ಮಾತಿಗೆ ತಪ್ಪಿ ನಡೆದರೆ ಪರಮಾತ್ಮ ಮೆಚ್ಚಲ್ಲ, ಡಿಕೆಶಿಗೆ ಸಿಎಂ ಸ್ಥಾನ ಕೊಡಿ – ನಂಜಾವಧೂತ ಸ್ವಾಮೀಜಿ
ಮೊಸಾದ್ ರಾಜ್ಯಗಳು ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದ ವಿವರವಾದ ಡೇಟಾವನ್ನು ಸಿದ್ಧಪಡಿಸಿತ್ತು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಸ್ವಲ್ಪ ಬೇಸರವಿದ್ದರೂ 206 ಸ್ಥಾನಗಳಿಂದ 44 ಸ್ಥಾನಗಳಿಗೆ ಪಕ್ಷ ಕುಸಿಯಲು ಸಾಧ್ಯವೇ ಇಲ್ಲ. ಇದು ಜನರು ನೀಡಿದ ಆದೇಶವಲ್ಲ. ವಿದೇಶಿ ಶಕ್ತಿಗಳ ಹಸ್ತಕ್ಷೇಪದಿಂದ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಸೋಲಾಗಿದೆ ಎಂದು ಹೇಳಿದರು.

