– ವಸತಿ ನಿಲಯದ ಮೇಲ್ವಿಚಾರಕಿ, ಅಡುಗೆ ಸಹಾಯಕಿಯರು ಸೇರಿ ಮೂವರು ಅಮಾನತು
ಕೊಪ್ಪಳ: ಜಿಲ್ಲೆಯ ಕುಕನೂರ ವಸತಿ ನಿಲಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಮಗವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, ವಸತಿ ನಿಲಯದ ಮೂವರನ್ನು ಅಮಾನತು ಮಾಡಲಾಗಿದೆ.
ಈ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರು ನೀಡಿದ್ದು, ಹನುಮಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕುಕನೂರ ತಂಡದ ವೈದ್ಯರಾದ ಭರತೇಶ್, ಸಬೀಯಾ ವಿರುದ್ಧ ಕುಕನೂರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ:ಸಿಲಿಂಡರ್ ಸ್ಫೋಟ – 7 ವರ್ಷದ ಹಿಂದೆ ನಿರ್ಮಿಸಿದ್ದ ಮನೆಯ ಗೋಡೆ ಕುಸಿತ
ವಸತಿ ನಿಲಯದ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲು ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಪ್ರತಿ ತಿಂಗಳು ತಪಾಸಣೆ ಮಾಡಲಾಗುತ್ತದೆ. ಆದರೆ ಕಳೆದ ಎರಡು ತಿಂಗಳ ಹಿಂದೆ ವಿದ್ಯಾರ್ಥಿನಿಯನ್ನು ತಪಾಸಣೆ ಮಾಡಿದಾಗ ಗರ್ಭಿಣಿಯಾಗಿರೋದು ಪತ್ತೆ ಹಚ್ಚಿಲ್ಲ. ಹೀಗಾಗಿ ಕರ್ತವ್ಯಲೋಪದಡಿ ಇಬ್ಬರು ವೈದ್ಯಾಧಿಕಾರಿಗಳ ಮೇಲೆಯೂ ಕೇಸ್ ದಾಖಲಾಗಿದೆ. ಇನ್ನೂ ವಸತಿ ನಿಲಯದ ಮೇಲ್ವಿಚಾರಕಿ, ಅಡುಗೆ ಸಹಾಕಿಯರಾದ ಪಾರ್ವತಿ, ಪ್ರಿಯಾಂಕಾ ಮೂವರನ್ನು ಅಮಾನತು ಮಾಡಿದ್ದಾರೆ.
ಏನಿದು ಪ್ರಕರಣ?
ಕುಕನೂರು ವಸತಿ ನಿಲಯದಲ್ಲಿ ಬುಧವಾರ (ನ.26 ಬೆಳಿಗ್ಗೆ 5.30ರ ಸುಮಾರಿಗೆ ಹತ್ತನೇ ತರಗತಿ ವಿದ್ಯಾರ್ಥಿನಿ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಶೌಚಾಲಯಕ್ಕೆ ತೆರಳಿದಾಗ ಅಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ್ದಳು. ಈ ಕುರಿತು ವಿದ್ಯಾರ್ಥಿನಿ ಮಾತನಾಡಿದ್ದು, ಆರೋಪಿಯು ಎಂಟನೇ ತರಗತಿಯಿಂದಲೇ ಪರಿಚಯವಿದ್ದು, ನನ್ನನ್ನು ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ಹೇಳಿ ಶಾಲೆ ಮುಗಿದ ಮೇಲೆ ಹಲವು ಬಾರಿ ಲೈಂಗಿಕ ಸಂಪರ್ಕ ಮಾಡಿದ್ದಾನೆಂದು ಎಂದು ತಿಳಿಸಿದ್ದಾಳೆ.ಇದನ್ನೂ ಓದಿ: ಮನೆಯಲ್ಲಿದ್ದು ಏನ್ ಮಾಡ್ತೀಯಾ? ಕೆಲಸಕ್ಕಾದ್ರೂ ಹೋಗು ಎಂದಿದ್ದಕ್ಕೆ ರೈಲಿಗೆ ತಲೆಕೊಟ್ಟ ಬಾಲಕ

