ಕಲಬುರಗಿ: ಶಾಲಾ ಬಾಲಕಿ (School Girl) ಮೇಲೆ ಗೂಡ್ಸ್ ವಾಹನ (Goods Vehicle) ಹರಿದ ಪರಿಣಾಮ ಬಾಲಕಿಯ ಕಾಲು ಕಟ್ ಆಗಿ ಗಂಭೀರ ಗಾಯಗೊಂಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jevargi) ತಾಲೂಕಿನ ಇಜೇರಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀ ಸಗರ್ (9) ಗಂಭೀರ ಗಾಯಗೊಂಡ ಬಾಲಕಿ. 3ನೇ ತರಗತಿ ಓದುತ್ತಿರುವ ಲಕ್ಷ್ಮೀ ನೀರು ಕುಡಿಯಲು ಶಾಲೆ ಹೊರಗಡೆ ರಸ್ತೆ ಪಕ್ಕದಲ್ಲಿರುವ ಹ್ಯಾಂಡ್ ಪಂಪ್ ಬಳಿ ಬಂದಾಗ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಗಡಿಯಲ್ಲಿ ಭಾರತಕ್ಕೆ ಒಳನುಸುಳುತ್ತಿದ್ದ ಪಾಕ್ ಪ್ರಜೆ ಬಂಧನ
ಲಕ್ಷ್ಮೀ ಬಲಗಾಲಿನ ಮೇಲೆ ಹತ್ತಿ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನ ಹರಿದಿದೆ. ಘಟನೆಯ ಪರಿಣಾಮ ಕಾಲು ಕಟ್ ಆಗಿ ನೋವಿನಲ್ಲಿ ಬಾಲಕಿ ಲಕ್ಷ್ಮೀ ಅರಚಾಡಿದ್ದಾಳೆ. ಬಾಲಕಿಯ ಬಲಗಾಲು ಭಾಗಶಃ ಕಟ್ ಆಗಿದ್ದು, ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೊಟ್ಟ ಮಾತಿಗೆ ತಪ್ಪಿ ನಡೆದರೆ ಪರಮಾತ್ಮ ಮೆಚ್ಚಲ್ಲ, ಡಿಕೆಶಿಗೆ ಸಿಎಂ ಸ್ಥಾನ ಕೊಡಿ – ನಂಜಾವಧೂತ ಸ್ವಾಮೀಜಿ

