ಬೆಂಗಳೂರು: ದೆಹಲಿಗೆ (Delhi) ಹೋದ ಬಳಿಕ ಮೂರ್ನಾಲ್ಕು ಇಂಪಾರ್ಟೆಂಟ್ ಜನರನ್ನ ಕರೆಸಿ ಮಾತನಾಡ್ತೀನಿ. ಹೈಕಮಾಂಡ್ ಎಲ್ಲವನ್ನ ಸೆಟಲ್ ಮಾಡುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತಿಳಿಸಿದರು.
ಇಂದು ದೆಹಲಿಯ ಇಂದಿರಾ ಕಾಂಗ್ರೆಸ್ ಭವನದಲ್ಲಿ (Congress Bhavan) ಹೈಕಮಾಂಡ್ ಸಭೆ ನಿಗದಿಯಾಗಿರುವ ಹಿನ್ನೆಲೆ ಬೆಂಗಳೂರಿನಿಂದ ಅವರು ದೆಹಲಿಗೆ ತೆರಳಿದರು. ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಮೂರ್ನಾಲ್ಕು ಜನರನ್ನ ಕರೆಸಿ ಮಾತಾಡ್ತೀನಿ. ಮುಂದೆ ಹೇಗೆ ನಡೆಯಬೇಕು ಅಂತ ತೀರ್ಮಾನ ಮಾಡ್ತೀನಿ. ಸಿಎಂ-ಡಿಸಿಎಂ ಎಲ್ಲರನ್ನೂ ಕರೆಸಿ ಸೆಟಲ್ ಮಾಡ್ತೀವಿ ಎಂದು ಹೇಳಿದರು.
ನಾನು ಎಲ್ಲರನ್ನೂ ಕರೆಸಿ ಚರ್ಚೆ ಮಾಡ್ತೇನೆ. ರಾಹುಲ್ ಗಾಂಧಿ (Rahul Gandhi) ಕೂಡ ಸಭೆಯಲ್ಲಿ ಇರ್ತಾರೆ. ಸಿಎಂ ಡಿಸಿಎಂ ಇಬ್ಬರೂ ಇರ್ತಾರೆ. ಹೈಕಮಾಂಡ್ ಅಂದರೆ ಟೀಮ್ ಏಕಾಂಗಿ ಅಲ್ಲ. ಹೈಕಮಾಂಡ್ ಟೀಮ್ ಕೂತು ಚರ್ಚಿಸಿ ನಿರ್ಣಯ ಕೈಗೊಳ್ಳತ್ತೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್ ಪಾಲಿನ ನಿರ್ಣಾಯಕ ಸಭೆ ಇಂದು
ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಫೈಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇದೇ ಶನಿವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಿಎಂ, ಡಿಸಿಎಂ ಇಬ್ಬರೂ ಸಭೆಗೆ ತೆರಳೋ ಸಾಧ್ಯತೆಯಿದ್ದು, ಇನ್ನೆರಡು ದಿನಗಳಲ್ಲಿ ಸಂಧಾನ ಸೂತ್ರ ಹೊರಬೀಳಲಿದೆ. ಅಲ್ಲದೇ ಸಿಎಂ-ಡಿಸಿಎಂ ಮುಖಾಮುಖಿ ಆಗುವುದಕ್ಕೂ ಮುನ್ನ ಹೈಕಮಾಂಡ್‌ಗೆ ಕ್ಲ್ಯಾರಿಟಿಯ ಅಗತ್ಯವಿದೆ. ಹೀಗಾಗಿ ಇಂದು ನಿರ್ಣಾಯಕ ಸಭೆ ನಡೆಸಲಿದೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.
ದೆಹಲಿಯ ಕಾಂಗ್ರೆಸ್ ಭವನದಲ್ಲಿಂದು ರಾಜ್ಯ ಕಾಂಗ್ರೆಸ್ ಪಾಲಿನ ನಿರ್ಣಾಯಕ ಸಭೆ ನಡೆಯಲಿದ್ದು, ಯಾರು ಸಿಎಂ ಬೇಕು ಅನ್ನೋದರ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ಅದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಒಟ್ಟು ಸೇರಿ ಇಂದು ಸಭೆ ನಡೆಸಲಿದ್ದಾರೆ ಅಂತ ಹೇಳಲಾಗ್ತಿದೆ. ಇಂದಿನ ಸಭೆಯಲ್ಲಿ ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್ ನಿಲುವು ಧನಿರಬೇಕು ಎಂಬ ವಿಚಾರದಲ್ಲಿ ಒಂದು ಕ್ಲಾರಿಟಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

