ಜೈಪುರ: ರಾಜಸ್ಥಾನದ (Rajasthan) ಬಾರ್ಮರ್ ಜಿಲ್ಲೆಯ ಗಡಿಯಲ್ಲಿ ಭಾರತಕ್ಕೆ ಒಳನುಸುಳುತ್ತಿದ್ದ ಪಾಕಿಸ್ತಾನ ಪ್ರಜೆಯನ್ನು ಬಿಎಸ್‌ಎಫ್ (BSF) ಸಿಬ್ಬಂದಿ ಬಂಧಿಸಿದ್ದಾರೆ.
ಪಾಕ್ ಪ್ರಜೆ ಕತ್ತಲೆ ಸಮಯದಲ್ಲಿ ಗಡಿ ದಾಟಿ ದನದ ಕೊಟ್ಟಿಗೆಯೊಳಗೆ ಅಡಗಿಕೊಂಡು ಬಿಎಸ್‌ಎಫ್ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಬಿಎಸ್‌ಎಫ್ ಆತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದೆ. ಆರಂಭಿಕ ವಿಚಾರಣೆಯ ಸಮಯದಲ್ಲಿ ಅವನ ಬಳಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಆದಾಗ್ಯೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಅಲ್ ಫಲಾಹ್ ವಿವಿಗೆ ಅಲ್ಪಸಂಖ್ಯಾತ ಸ್ಥಾನಮಾನ ರದ್ದಾಗುವ ಭೀತಿ
ಹಿಂದಾಲ್ (24) ಬಂಧಿತ ಆರೋಪಿ. ಈತ ಪಾಕಿಸ್ತಾನದ ಮಿಥಿ ಜಿಲ್ಲೆಯ ಛಚ್ರೊ ತೆಹ್ಸಿಲ್‌ನ ನಯತಾಲಾ ನಿವಾಸಿ. ಗಡಿ ದಾಟಿ ಭಾರತಕ್ಕೆ ಏಕೆ ಪ್ರವೇಶಿಸಿದ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಕ್ಟೋಬರ್ 8 ರಂದು, ಬಿಎಸ್ಎಫ್ ಅಂತರರಾಷ್ಟ್ರೀಯ ಗಡಿಯ ಶೂನ್ಯ ಬಿಂದುವಿನಲ್ಲಿ ಪಾಕಿಸ್ತಾನಿ ವ್ಯಕ್ತಿ ಮತ್ತು ಆತನ ಏಳು ವರ್ಷದ ಮಗನನ್ನು ಬಂಧಿಸಿತ್ತು. ಇದನ್ನೂ ಓದಿ: ದೆಹಲಿ ಕಾರು ಸ್ಫೋಟ ಕೇಸ್ – ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ 7ನೇ ಆರೋಪಿ ಬಂಧಿಸಿದ ಎನ್‌ಐಎ

