ಬೆಂಗಳೂರು: ಬೆಟ್ಟಿಂಗ್ ಆ್ಯಪ್‌ಗಳ ವಿರುದ್ಧ ಸಮರ ಸಾರಿರುವ ಅಧಿಕಾರಿಗಳು ವಿಂಜೋ ಬೆಟ್ಟಿಂಗ್ ಆ್ಯಪ್ (WinZO Betting App) ಮೇಲೆ ದಾಳಿ ಮಾಡಿದ್ದಾರೆ. ಕಳೆದ ಒಂದು ವಾರದಿಂದ ದಾಳಿ ನಡೆಸಿದ್ದ ಇಡಿ (ED) ಅಧಿಕಾರಿಗಳು ವಿಂಜೋ ಆ್ಯಪ್‌ನ ನಿರ್ದೇಶಕನ ಬಂಧನ ಮಾಡಿದ್ದಾರೆ.
ವಿಂಜೋ ಬೆಟ್ಟಿಂಗ್ ಆ್ಯಪ್ ನಿರ್ದೇಶಕ ಸಮ್ಯಸಿಂಗ್ ಬಂಧಿಸಲಾಗಿದೆ. ಈ ಮೂಲಕ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಶಾಕ್ ನೀಡಲು ಇ.ಡಿ ತಯಾರಿ ನಡೆಸಿದೆ. ಇದನ್ನೂ ಓದಿ: ಮಠಾಧೀಶರು ಹೇಳಿದ ತಕ್ಷಣ ಸಿಎಂ ಆಗಲು ಅವಕಾಶ ಇದ್ಯಾ – ಕಾಗಿನೆಲೆ ಶ್ರೀ ಪ್ರಶ್ನೆ
ವಿಂಜೋ ಆ್ಯಪ್‌ನ ಜಾಹಿರಾತು ಮೂಲಕ ಜಗಜ್ಜಾಹಿರು ಮಾಡಿದ್ದ ಸೆಲೆಬ್ರಿಟಿಗಳಿಗೆ ಕೂಡ ಸಮನ್ಸ್ ಕೊಡೋದಕ್ಕೆ ತಯಾರಿ ನಡೆಸಿದೆ. ಕ್ರಿಕೆಟ್ ಸೆಲೆಬ್ರಿಟಿ ಇಂದ ಹಿಡಿದು ಬಾಲಿವುಡ್ ಸ್ಟಾರ್ ತನಕ ಕೂಡ ವಿಂಜೋ ಆ್ಯಪ್ ಪ್ರಚಾರದಲ್ಲಿ ಇದ್ದಾರೆ. ಇದನ್ನೂ ಓದಿ: ಸಚಿವರ ಆಪ್ತರ ರಿಯಲ್ ಎಸ್ಟೇಟ್ ಬಿಲ್ಡರ್ ಮೇಲೆ ಇಡಿ ದಾಳಿ

