ನಾಗಾರ್ಜುನ (Nagarjuna) ಮೊದಲ ಪತ್ನಿಯ ಮಗನಾಗಿ ಜನಿಸಿದವರು ನಾಗಚೈತನ್ಯ. ಎರಡನೇ ತಾಯಿಯಾಗಿ ಬಂದವರು ನಟಿ ಅಮಲಾ. ನಾಗಚೈತನ್ಯ (Nagachaitanya) ತಾಯಿಗೆ ವಿಚ್ಛೇದನ ನೀಡಿದ ಬಳಿಕ ನಾಗಾರ್ಜುನ ನಟಿ ಅಮಲಾರನ್ನು ವಿವಾಹವಾಗಿದ್ದರು. ಇದೀಗ ನಾಗಚೈತನ್ಯ ತಾಯಿಗಿಂತ ಹೆಚ್ಚಾಗಿ ಮಲತಾಯಿ ಅಮಲಾ ಜೊತೆಯೇ ಕಾಣಿಸಿಕೊಳ್ತಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ನಾಗಚೈತನ್ಯ ಜೊತೆಗಿನ ಉತ್ತಮ ಮಾತೃತ್ವದ ಕುರಿತು ಅಮಲಾ ಮಾತನಾಡಿದ್ದಾರೆ.
ಮಲಮಗ ನಾಗಚೈತನ್ಯ ಕುರಿತು ಅಮತಾ ಮಾತುಗಳು ಟಾಲಿವುಡ್‌ನಲ್ಲಿ ಬಹಳ ಚರ್ಚೆಯಾಗುತ್ತಿದೆ. ಕಾರಣ ಸ್ವಂತ ತಾಯಿಗಿಂತಲೂ ಹೆಚ್ಚಾಗಿ ನಾಗಚೈತನ್ಯ ಮಲತಾಯಿ ಅಮಲಾರೊಂದಿಗೆ ಕಾಣಿಸಿಕೊಳ್ತಾರೆ. ಇಂಥಹ ಬಾಂಧವ್ಯ ಹೇಗೆ ಬೆಳೆಯಿತು..? ಮಲತಾಯಿಯನ್ನ ನಾಗಚೈತನ್ಯ ಹೇಗೆ ಸ್ವೀಕರಿಸಿದರು..? ಅದೆಲ್ಲ ಅನುಮಾನಕ್ಕೆ ಇದೀಗ ಮಲತಾಯಿ, ನಟಿ ಅಮಲಾ ತೆರೆ ಎಳೆದಿದ್ದಾರೆ.ಇದನ್ನೂ ಓದಿ: ಪೋಕ್ಸೋ ಮೊದಲ ಕೇಸಲ್ಲಿ ಮುರುಘಾ ಶ್ರೀ ಖುಲಾಸೆ – ಕೋರ್ಟ್ ಆದೇಶದಲ್ಲಿ ಏನಿದೆ?
ನಾಗಾರ್ಜುನ ಜೊತೆ ಅಮಲಾ ವಿವಾಹವಾದಾಗ ನಾಗಚೈತನ್ಯ ಇನ್ನೂ ಚಿಕ್ಕವರಾಗಿದ್ದರು. ಆ ವೇಳೆ ನಾಗಚೈತನ್ಯ ತಾಯಿ ಜೊತೆ ಚೆನೈನಲ್ಲಿ ಇದ್ದಿದ್ರಂತೆ. ಬಳಿಕ ಕಾಲೇಜು ಶಿಕ್ಷಣಕ್ಕಾಗಿ ನಾಗಚೈತನ್ಯ ಹೈದ್ರಾಬಾದ್‌ಗೆ ಬಂದರಂತೆ. ಆರಂಭದಿಂದಲೂ ನಾಗಚೈತನ್ಯ ಜೊತೆ ಸಂಪರ್ಕದಲ್ಲೇ ಇದ್ದ ಅಮಲಾ ಹೈದ್ರಾಬಾದ್‌ಗೆ ಬಂದ ಬಳಿಕ ಬಾಂಧವ್ಯ ಇನ್ನೂ ಗಟ್ಟಿಯಾಗಿತು ಅನ್ನೋದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ.
ನಾಗಚೈತನ್ಯ ಸ್ವಭಾವವನ್ನು ಹೊಗಳುವ ಅಮಲಾ, ವಯಸ್ಸಿಗೆ ಮೀರಿದ ಪ್ರಬುದ್ಧತೆ ಮತ್ತು ಬುದ್ಧಿವಂತಿಕೆಯನ್ನು ನಾಗಚೈತನ್ಯ ಹೊಂದಿದ್ದಾರೆ. ತುಂಬಾ ಜವಾಬ್ದಾರಿಯುತ ಮನುಷ್ಯ. ಯಾವತ್ತೂ ತಪ್ಪುಗಳನ್ನು ಮಾಡದ ಹುಡುಗ. ಹಾಗೆಯೇ ನಾಗಚೈತನ್ಯ ಸದಾ ತಂದೆಯ ಮಾತುಗಳನ್ನ ಕೇಳುವ ವ್ಯಕ್ತಿ. ಹೀಗೆ ಮೊದಲ ಬಾರಿಗೆ ಮಲಮಗನ ಜೊತೆಗಿನ ಬಾಂಧವ್ಯದ ಕುರಿತು ಅಮಲಾ ಮಾತನಾಡಿದ್ದಾರೆ.ಇದನ್ನೂ ಓದಿ: ಸಿಎಂ ಹುದ್ದೆಗಿಂತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ: ಡಿಕೆಶಿ

