ಗ್ಲಾಸ್ಗೋ: 2030ರ ಕಾಮನ್‌ವೆಲ್ತ್ ಗೇಮ್ಸ್ (Commonwealth Games 2030) ಗುಜರಾತಿನ ಅಹಮದಾಬಾದ್‌ನಲ್ಲಿ (Ahmedabad) ನಡೆಯಲಿದೆ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಇಂದು ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಾಸಭೆಯಲ್ಲಿ ಈ ನಿರ್ಧಾರ ಪ್ರಕಟವಾಗಿದೆ.
2030ರ ಶತಮಾನೋತ್ಸವದ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ ಮಾಡಲು ಕಾಮನ್‌ವೆಲ್ತ್ ಗೇಮ್ಸ್‌ನ ಕಾರ್ಯನಿರ್ವಾಹಕ ಮಂಡಳಿ ಅಹಮದಾಬಾದ್ ನಗರವನ್ನು ಶಿಫಾರಸು ಮಾಡಿತ್ತು.
ಗೇಮ್ಸ್ ಆಯೋಜನೆಗೆ ನೈಜೀರಿಯಾ ತನ್ನ ರಾಜಧಾನಿ ಅಬುಜಾ ನಗರವನ್ನು ಬಿಡ್‌ಗೆ ಕಳುಹಿಸಿತ್ತು. ಆದರೆ ಇಂದು 74 ಸದಸ್ಯರ ಸಾಮಾನ್ಯ ಸಭೆಯು ಅಹಮದಾಬಾದ್‌ನಲ್ಲಿ ಕ್ರೀಡಾಕೂಟ ಆಯೋಜನೆಗೆ ಅನುಮೋದನೆ ನೀಡಿದೆ. ಅಬುಜಾದಲ್ಲಿ 2034ರ ಕ್ರೀಡಾಕೂಟ ಆಯೋಜನೆಯಾಗಲಿದೆ.

ಈ ಹಿಂದೆ 2010 ರಲ್ಲಿ ಭಾರತ ದೆಹಲಿಯಲ್ಲಿ (Delhi) ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜನೆ ಮಾಡಿತ್ತು. 2036 ರ ಒಲಿಂಪಿಕ್ಸ್ (Olympic Games) ಆಯೋಜನೆಗೆ ಭಾರತ ಈಗಾಗಲೇ ಬಿಡ್ ಸಲ್ಲಿಸಿದೆ. ಇದನ್ನೂ ಓದಿ: ಭಾರತೀಯ ಕ್ರಿಕೆಟ್ ಮುಖ್ಯ, ನಾನಲ್ಲ – ಕೋಚ್ ಹುದ್ದೆಗೆ ಗುಡ್ ಬೈ ಹೇಳ್ತಾರಾ ಗಂಭೀರ್?
ಮುಂದಿನ ವರ್ಷ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಮತ್ತು ಏಷ್ಯಾ ಪ್ಯಾರಾ-ಆರ್ಚರಿ ಕಪ್ ಅನ್ನು ಆಯೋಜಿಸಲಿದೆ. 2029 ರಲ್ಲಿ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟಗಳು ಅಹಮದಾಬಾದ್, ಗಾಂಧಿನಗರ ಮತ್ತು ಏಕ್ತಾ ನಗರದಲ್ಲಿ ನಡೆಯಲಿವೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್, ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣವನ್ನು ಒಳಗೊಂಡಿದ್ದು, ಹೊಸ ಅಕ್ವಾಟಿಕ್ಸ್ ಕೇಂದ್ರ, ಫುಟ್‌ಬಾಲ್ ಕ್ರೀಡಾಂಗಣ ಮತ್ತು ಎರಡು ಒಳಾಂಗಣ ಕ್ರೀಡಾ ಕ್ರೀಡಾಂಗಣಗಳನ್ನು ಒಳಗೊಂಡಿದೆ. ಈ ಸಂಕೀರ್ಣವು 3,000 ಮಂದಿ ಉಳಿದುಕೊಳ್ಳಲು ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಕ್ರೀಡಾಪಟುಗಳ ಗ್ರಾಮವನ್ನು ಸಹ ಒಳಗೊಂಡಿರುವುದು ವಿಶೇಷ.

