– ನಾನು ಬ್ಯುಸಿನೆಸ್‌ಮೆನ್ ಅಂತ ಹುಡುಗಿಗೆ ನಂಬಿಸಿದ್ದ ಆರೋಪಿ
ಬೆಂಗಳೂರು: ಇನ್‌ಸ್ಟಾದಲ್ಲಿ ವಿದ್ಯಾರ್ಥಿಯನ್ನು ಪರಿಚಯ ಮಾಡಿಕೊಂಡು, ಪ್ರೀತಿ-ಮದುವೆ ಅಂತ ಆಸೆ ತೋರಿಸಿ ಅರ್ಧ ಕೆಜಿ ಚಿನ್ನಕ್ಕೆ ಕನ್ನ ಹಾಕಿದ್ದ ನಕಲಿ ಬ್ಯುಸಿನೆಸ್‌ಮೆನ್ ಪೊಲೀಸರು ಬಂಧಿಸಿದ್ದಾರೆ.
ಜನಾರ್ದನ ಅಲಿಯಾಸ್ ಸಿದ್ಧಾರ್ಥ್ ವೀರ್ ಬಂಧಿತ ಆರೋಪಿ. ನೀಟ್‌ಗೆ ತಯಾರಿ ನಡೆಸುತ್ತಿದ್ದ ಹುಡುಗಿಯನ್ನು ಈತ ಇನ್‌ಸ್ಟಾದಲ್ಲಿ ಪರಿಚಯ ಮಾಡಿಕೊಂಡಿದ್ದ. ಮದುವೆ ಆಗ್ತೀನಿ ಅಂತ ಮನೆಗೆ ಯುವತಿ ಮನೆಗೆ ಬಂದವನು, ಅರ್ಧ ಕೆಜಿ ಚಿನ್ನ ಕಳ್ಳತನ ಮಾಡಿದ್ದ. ಈಗ ಜ್ಞಾನಭಾರತಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ರಿಕ್ವೆಸ್ಟ್ ಕಳಿಸಿದ್ದ ಆರೋಪಿ ಜನಾರ್ದನ್, ತಾನು ಬ್ಯುಸಿನೆಸ್‌ಮೆನ್ ಅಂತಾ ಹೇಳಿ ಬಿಲ್ಡಪ್ ಕೊಟ್ಟಿದ್ದ. ಸಿನಿಮಾ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಿ ವಿದ್ಯಾರ್ಥಿನಿಗೆ ಮದುವೆಯಾಗೋದಾಗಿ ನಂಬಿಸಿದ್ದ. ಯಾರೂ ಇಲ್ಲದಿದ್ದಾಗ ಆಗಾಗ ವಿದ್ಯಾರ್ಥಿನಿ ಮನೆಗೆ ಬಂದು ಹೋಗ್ತಿದ್ದ. ಬಾರ್ & ರೆಸ್ಟೋರೆಂಟ್ ಮಾಡ್ಬೇಕು ಅಂತಾ ಹಂತ ಹಂತವಾಗಿ ಲಕ್ಷ ಲಕ್ಷ ಹಣ ಕೇಳಿದ್ದ. ಹಂತ ಹಂತವಾಗಿ ಏಳೆಂಟು ಲಕ್ಷ ಈಸ್ಕೊಂಡಿದ್ದ.
ನಂತರ ಭೇಟಿಗೆ ಅಂತ ಮನೆಗೆ ಬಂದು ಮತ್ತೆ ಹಣ ಕೇಳಿದ್ದ. ಮನೆಗೆ ಬಂದಾಗ ಕಾಫಿ ಮಾಡಿಕೊಡಲು ಕಿಚನ್‌ಗೆ ವಿದ್ಯಾರ್ಥಿನಿ ಹೋಗಿದ್ದಳು. ಈ ವೇಳೆ ಮನೆಯಲ್ಲಿದ್ದ ಅರ್ಧ ಕೆಜಿಯಷ್ಟು ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದ. ಸಂಬಂಧಿಕರ ಫಂಕ್ಷನ್ ವೇಳೆ ಚಿನ್ನಾಭರಣಗಳ ಬಗ್ಗೆ ವಿದ್ಯಾರ್ಥಿನಿ ತಾಯಿ ಕೇಳಿದಾಗ, ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ.
ಕೂಡಲೇ ಜ್ಞಾನಭಾರತಿ ಠಾಣೆಗೆ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ದೂರಿನ ಅನ್ವಯ ಕೇಸ್ ದಾಖಲಿಸಿ ಆರೋಪಿಯ ಬಂಧನ ಮಾಡಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

