ನವದೆಹಲಿ: ಪಾನ್ ಮಸಾಲಾ ಉದ್ಯಮಿ ಕಮಲ್ ಕಿಶೋರ್ ಚೌರಾಸಿಯಾ ಅವರ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಮಲ್ ಕಿಶೋರ್ ಚೌರಾಸಿಯಾ ಅವರು ಕಮಲಾ ಪಸಂದ್ ಮತ್ತು ರಾಜಶ್ರೀ ಬ್ರ್ಯಾಂಡ್‌ಗಳ ರೂವಾರಿ, ಪಾನ್ ಮಸಾಲಾ ದೊರೆ ಎಂದೇ ಜನಪ್ರಿಯರಾಗಿದ್ದಾರೆ. ಅವರ ಸೊಸೆ ದಕ್ಷಿಣ ದೆಹಲಿಯ ಐಷಾರಾಮಿ ವಸಂತ್ ವಿಹಾರ್‌ನಲ್ಲಿರುವ ಕುಟುಂಬದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಮಲ್ ಕಿಶೋರ್ ಅವರ ಮಗ ಅರ್ಪಿತ್ ಅವರನ್ನು ವಿವಾಹವಾಗಿದ್ದ ದೀಪ್ತಿ ಚೌರಾಸಿಯಾ (40) ನಿನ್ನೆ ಮಧ್ಯಾಹ್ನ ಕುಟುಂಬದ ಐಷಾರಾಮಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದುಪಟ್ಟಾ ಬಳಸಿ ನೇಣು ಬಿಗಿದುಕೊಂಡಿದ್ದಾರೆ.
‘ಸಂಬಂಧದಲ್ಲಿ ಪ್ರೀತಿ ಮತ್ತು ವಿಶ್ವಾಸವಿಲ್ಲದಿದ್ದರೆ, ಜೀವನದ ಅರ್ಥವೇನು?’ ಅಂತ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ.
ದೀಪ್ತಿ ಮತ್ತು ಅರ್ಪಿತ್ 2010 ರಲ್ಲಿ ವಿವಾಹವಾದರು. ದಂಪತಿಗೆ 14 ವರ್ಷದ ಮಗ ಮತ್ತು ಐದು ವರ್ಷದ ಮಗಳು ಇದ್ದಾರೆ. ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ವೈದ್ಯರ ತಂಡವು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದೆ. ಈ ದುರಂತ ಪ್ರಕರಣದ ಬಗ್ಗೆ ಪೊಲೀಸರು ಇನ್ನೂ ಸಾರ್ವಜನಿಕ ಹೇಳಿಕೆ ನೀಡಿಲ್ಲ.

