ಕನ್ನಡ ಚಿತ್ರರಂಗದಲ್ಲಿ ವೈಭವೋಪೇತ ಬಹುಕೋಟಿ ವೆಚ್ಚದ, ಬಹುನಿರೀಕ್ಷಿತ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗ್ತಿವೆ. ಆ ಸಾಲಿಗೆ ಈಗ ಬಲರಾಮನ ದಿನಗಳು (Balaramana Dinagalu) ಚಿತ್ರ ಸೇರ್ಪಡೆಯಾಗಿದೆ. ಹೌದು, 2026ರ ಬಹು ನಿರೀಕ್ಷಿತ ಕನ್ನಡ ಚಿತ್ರವಾಗಿ ಬರ್ತಿದೆ ಬಲರಾಮನ ದಿನಗಳು ಚಿತ್ರ. ಇದಕ್ಕಾಗಿ ಚಿತ್ರತಂಡ ಭರದಿಂದ ಕೆಲಸಗಳನ್ನ ಮಾಡ್ತಿದೆ.
ಬಲರಾಮ ಚಿತ್ರ ಸೆಟ್ಟೇರಿದ ದಿನದಿಂದಲೂ ಹಲವು ವಿಶೇಷ ವಿಚಾರಗಳಿಗೆ ಸುದ್ದಿಯಾಗುತ್ತಲೇ ಬಂದಿದೆ. ಅದ್ರಲ್ಲೂ ದಕ್ಷಿಣ ಭಾರತ ಚಿತ್ರರಂಗದ ತಮಿಳಿನ ಖ್ಯಾತ ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಅವ್ರನ್ನ ಕರೆತಂದು ಕಾರ್ಯಕ್ರಮ ಮಾಡಿ ಸದ್ದು ಮಾಡಿತ್ತು. ರಜಿನಿಕಾಂತ್ ಸೇರಿ ತಮಿಳಿಖ್ಯಾತನಾಮರಿಗೆ ದೊಡ್ಡ ಹಿಟ್‌ಗಳನ್ನ ಕೊಟ್ಟಿರೋ ಸಂತೋಷ್ ನಾರಾಯಣನ್, 50 ಚಿತ್ರಗಳ ನಂತರ 51ನೇ ಚಿತ್ರಕ್ಕೆ ಕನ್ನಡಕ್ಕೆ ಬಂದಿರೋದು ಸಂತಸ ತಂದಿದೆ ಎಂದು ಹೇಳುತ್ತಾ, ತಮ್ಮ ಮೊದಲ ಕನ್ನಡ ಚಿತ್ರ ಬಲರಾಮನ ದಿನಗಳು ಸಿನಿಮಾಗೆ ವಿಶೇಷ ಸಂಗೀತ ಸಂಯೋಜಿಸೋ ಭರವಸೆ ನೀಡಿದ್ರು. ಅದರಂತೆ ಇದೀಗ ಆ ಕೆಲಸವನ್ನ ಮುಗಿಸಿದ್ದು, ಡಿಸೆಂಬರ್‌ನಲ್ಲಿ ಮೊದಲ ಹಾಡಿನ ಬಿಡುಗಡೆಗೆ ಸಜ್ಜಾಗ್ತಿದೆ ಚಿತ್ರತಂಡ. ಇದನ್ನೂ ಓದಿ: ʻನನ್ ತಲೇಲಿ ಬುದ್ಧಿ ಇಲ್ಲ’ ಹೇಳಲು ಅಶ್ವಿನಿ ಒಪ್ಪಲ್ಲ!

ಕೆ.ಎಂ.ಚೈನತ್ಯ ನಿರ್ದೇಶನ ಪದ್ಮಾವತಿ ಫಿಲಂಸ್ ಬ್ಯಾನರ್‌ನಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಬಲರಾಮನ ದಿನಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 80ರ ದಶಕದ ಕಥೆಯಾಗಿರೋ ಈ ಚಿತ್ರಕ್ಕೆ ವೇಣುರವರ ಛಾಯಾಗ್ರಹಣವಿದೆ. ವಿನೋದ್ ಪ್ರಭಾಕರ್ ನಾಯಕನಾಗಿ ಬಲರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ.
ಆ ದಿನಗಳು ಚಿತ್ರದ ಪಾತ್ರಗಳು ಇಲ್ಲೂ ಮುಂದುವರೆದಿದ್ದು, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ,ಆಶೀಶ್ ವಿದ್ಯಾರ್ಥಿ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಹಲವು ಪ್ರತಿಭಾನ್ವಿತ ಕಲಾವಿದರ ದಂಡು ಈ ಚಿತ್ರದಲ್ಲಿದೆ. ಈಗಾಗ್ಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರೋ ಬಲರಾಮನ ದಿನಗಳು ಚಿತ್ರತಂಡ ಡಿಸೆಂಬರ್‌ನಲ್ಲಿ ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡೋ ಸನ್ನಿಹಿತದಲ್ಲಿದ್ದು, ಅಲ್ಲಿಂದಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದೆ. ಇದನ್ನೂ ಓದಿ: ʻಏಳೋ ಏಳೋ ಮಾದೇವʼ ಸಾಂಗ್ – ಸತೀಶ್ ನೀನಾಸಂ ಸೂಪರ್
ದೊಡ್ಡ ಬಜೆಟ್ ದೊಡ್ಡ ಕ್ಯಾನ್ವಾಸ್ ಇರೋ ಈ ಚಿತ್ರ 2026ರ ಬಹುನಿರೀಕ್ಷಿತ ಸಿನಿಮಾಗಳ ಸಾಲಲ್ಲಿದ್ದು, ಕನ್ನಡ ಸಿನಿಪ್ರಿಯಲ್ಲಿ ಈ ಚಿತ್ರದ ಮೇಲೆ ವಿಶೇಷ ಕುತೂಹಲ ಹುಟ್ಟಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಬಲರಾಮನ ದಿನಗಳು ಫೆಬ್ರುವರಿ ತಿಂಗಳಲ್ಲಿ ಪ್ರೇಕ್ಷಕರೆದುರಿಗೆ ಬರೋ ಖಚಿತ.

