– ಎರಡು ವಾರದಲ್ಲಿ ವರದಿ ಸಲ್ಲಿಸಲು ಸೂಚನೆ
ನವದೆಹಲಿ: ಭಾರತೀಯ ರೈಲ್ವೆಯಲ್ಲಿ (Indian Railways) ನೀಡುವ ಊಟದಲ್ಲಿ ಕೇವಲ ಹಲಾಲ್ ಪ್ರಮಾಣಪತ್ರ ಹೊಂದಿರುವ ಮಾಂಸವನ್ನು ಮಾತ್ರ ನೀಡಲಾಗುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ರೈಲ್ವೆ ಬೋರ್ಡ್‌ಗೆ ನೋಟಿಸ್ ಜಾರಿ ಮಾಡಿದೆ. ಈ ವಿಚಾರವಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಎರಡು ವಾರಗಳೊಳಗೆ ವರದಿ ಸಲ್ಲಿಸಲು ಸೂಚಿಸಿದೆ.
ಈ ಸಂಬಂಧ ಸಲ್ಲಿಸಿದ ದೂರಿಗಳಲ್ಲಿ ಈ ಅಭ್ಯಾಸ ಹಿಂದೂಗಳು, ಸಿಖ್‌ರು ಮತ್ತು ಎಸ್‌ಸಿಯ ಸಮುದಾಯಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ ಮಾಂಸ ವ್ಯಾಪಾರದಲ್ಲಿ ತೊಡಗಿರುವವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಧಾರ್ಮಿಕ ನಂಬಿಕೆಗಳಿಗೆ ಸರಿ ಹೊಂದುವ ಆಹಾರದ ಆಯ್ಕೆಗಳು ಸಿಗುತ್ತಿಲ್ಲ ಎಂದು ಉಲ್ಲೇಖಿಸುತ್ತಾರೆ.ಇದನ್ನೂ ಓದಿ: ಮ್ಯಾಂಗೋ ಪಚ್ಚನ ಹಸ್ರವ್ವ ಹಾಡು ರಿಲೀಸ್ : ಕಿಚ್ಚನ ಅಳಿಯನ ಸಿನಿಮಾ
ಎನ್‌ಹೆಚ್‌ಆರ್‌ಸಿ ಈ ಬಗ್ಗೆ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದು, ಸಂವಿಧಾನದ 14, 15ನೇ (ಧರ್ಮ, ಜಾತಿ ತಾರತಮ್ಯ ನಿಷೇಧ), 19(1)(g) (ವೃತ್ತಿ ಸ್ವಾತಂತ್ರ‍್ಯ), 21 (ಗೌರವದೊಂದಿಗೆ ಜೀವನ ಹಕ್ಕು) ಮತ್ತು 25ನೇ (ಧಾರ್ಮಿಕ ಸ್ವಾತಂತ್ರ‍್ಯ) ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಗುರುತಿಸಿದೆ.
ರೈಲ್ವೆಯಲ್ಲಿ ಕೇವಲ ಹಲಾಲ್ ಮಾಂಸ ನೀಡುವ ಬಗ್ಗೆ ಹಿಂದಿನಿಂದಲೂ ಸಾರ್ವಜನಿಕ ಚರ್ಚೆಗಳು ಮತ್ತು ದೂರುಗಳು ಬರುತ್ತಿವೆ. ಆದರೆ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಹಲಾಲ್ ಪ್ರಮಾಣೀಕೃತ ಮಾಂಸ ಕಡ್ಡಾಯವಿಲ್ಲ ಎಂದು ಅಧಿಕೃತವಾಗಿ ನಿರಾಕರಿಸಿದೆ. ಈ ದೂರಿನ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಹೆಚ್‌ಆರ್‌ಸಿ ರೈಲ್ವೆ ಬೋರ್ಡ್‌ಗೆ ಈ ಸಮಸ್ಯೆಯನ್ನು ಪರಿಹರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ವಿವರವಾದ ವರದಿಯನ್ನು ಸಲ್ಲಿಸಲು ಸೂಚಿಸಿದೆ.ಇದನ್ನೂ ಓದಿ: ಪ್ರಧಾನಿಗಳು ಬರ್ತಿದ್ದಾರೆ, ನೀವೂ ಉಡುಪಿಗೆ ಬಂದು ಕನಕನ ಗುಡಿ ವೀಕ್ಷಿಸಿ: ಸಿಎಂಗೆ ಪ್ರಮೋದ್ ಮಧ್ವರಾಜ್ ಆಹ್ವಾನ

