– ಬಿಗ್ ಬಾಸ್ ಮನೆಯಲ್ಲಿ ರಜತ್ v/s ಗಿಲ್ಲಿ
ಅತಿಥಿ ದೇವೋಭವ ಅಂತಾರೆ. ಆದರೆ, ಬಿಗ್ ಬಾಸ್ ಮನೇಲಿ ಅತಿಥಿಗಳು ಮತ್ತು ಹೋಟೆಲ್ ಸಿಬ್ಬಂದಿಯಾದ ಗಿಲ್ಲಿ ನಡುವೆ ಜಟಾಪಟಿ ನಡೆದಿದೆ. ಸ್ಪೆಷಲ್ ಗೆಸ್ಟ್‌ಗಳನ್ನು ನಡೆಸಿಕೊಳ್ಳೋ ರೀತಿನಾ ಇದು ಅಂತ ಅತಿಥಿಗಳು ಸಿಟ್ಟಾಗಿದ್ದಾರೆ. ಇದಕ್ಕೆ ಡೋಂಟ್ ಕೇರ್ ಅಂತ ಗಿಲ್ಲಿ ವರ್ತಿಸಿದ್ದಾರೆ. ಮಾಜಿ ಸ್ಪರ್ಧಿಗಳು ವರ್ಸಸ್ ಹಾಲಿ ಸ್ಪರ್ಧಿ ಗಿಲ್ಲಿ ನಡುವಿನ ಕಿತ್ತಾಟ ತಾರಕಕ್ಕೇರಿದೆ.
ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬಂದಿದ್ದ ಮಾಜಿ ಸ್ಪರ್ಧಿಗಳು, ಗಿಲ್ಲಿ ನಡೆಯಿಂದ ಸಿಟ್ಟಾಗಿದ್ದಾರೆ. ಗಿಲ್ಲಿ ಟಕ್ಕರ್ ಮೇಲೆ ಟಕ್ಕರ್ ಕೊಟ್ಟು ಅತಿಥಿಗಳನ್ನೇ ಉರಿಸಿದ್ದಾರೆ. ರಜತ್, ಉಗ್ರಂ ಮಂಜು ತಾಳ್ಮೆ ಕಳೆದುಕೊಂಡು ಗಿಲ್ಲಿಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಮಾಜಿ-ಹಾಲಿ ಸ್ಪರ್ಧಿಗಳ ಮುಖಾಮುಖಿ ಝಲಕ್ ಇರುವ ಪ್ರೋಮೊವನ್ನು ಬಿಗ್ ಬಾಸ್ ಹಂಚಿಕೊಂಡಿದೆ.
ಅತಿಥಿ ದೇವೋಭವ ❌ ಗಿಲ್ಲಿ: ಅತಿಥಿ-ಬೈಯ್ಯೋ-ಭವ ✅
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/TzSFIjMn49
— Colors Kannada (@ColorsKannada) November 26, 2025
ಬಿಗ್ ಬಾಸ್ ಅರಮನೆಗೆ ರಜತ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಮೋಕ್ಷಿತಾ, ತ್ರಿವಿಕ್ರಮ್ ಅತಿಥಿಗಳಾಗಿ ಆಗಮಿಸಿದ್ದಾರೆ. ಇವರಿಗೆ ಮನೆಯ ಸ್ಪರ್ಧಿಗಳು ಹೋಟೆಲ್ ಸಿಬ್ಬಂದಿಯಾಗಿ ಅತಿಥಿ ಸತ್ಕಾರ ಮಾಡಬೇಕು. ಪಾರ್ಟಿ ಅರೇಂಜ್ ಮಾಡಿ, ರಂಜಿಸಬೇಕು. ಯಾವುದೇ ಕುಂದುಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂಬುದು ಬಿಗ್ ಬಾಸ್ ಟಾಸ್ಕ್. ಆದರೆ, ಇದಕ್ಕೆ ಗಿಲ್ಲಿ ಡೋಂಟ್ ಕೇರ್ ಎಂದಿದ್ದಾರೆ. ಅತಿಥಿಗಳನ್ನೇ ಬೈತಿದ್ದಾರೆ.
ಗಿಲ್ಲಿ ನಡೆಯಿಂದ ಅತಿಥಿಗಳು ಬೇಸರಗೊಂಡಿದ್ದಾರೆ. ಆದರೆ, ಗಿಲ್ಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ‘ವಾವ್.. ಅನ್ನೋಥರ ಗೆಸ್ಟ್‌ಗಳು ಬರ್ತಾರೆ ಅಂದುಕೊಂಡಿದ್ದೆ.. ಆದರೆ, ಇವರನ್ನು ನೋಡಿ …. ಥೂ.. ಅನ್ನೋಥರ ಆಗೋಯ್ತು.. 5 ಜನ ನೆಂಟ್ರುಗಳು ಬಂದ್ರು. ತಿಂದ್ರು ತಿಂದ್ರು ತಿಂದ್ರು.. ಆದ್ರೂ ದೌಲತ್ತು. ತಿಂದಾಕೊ ಅವರಿಗೇ ಇಷ್ಟು ಇರಬೇಕಾದ್ರೆ.. ಇನ್ನು ತಿಂದಾಕೊ ನಮಗೆಷ್ಟು ಇರ್ಬೇಡ’ ಅಂತ ಗಿಲ್ಲಿ ಖಡಕ್ ಡೈಲಾಗ್ ಹೊಡೆದರು. ಗಿಲ್ಲಿ ಮಾತಿಗೆ ಸಹ ಸ್ಪರ್ಧಿಗಳು ಸಹ ಸಾಥ್ ನೀಡಿ ‘ಓ..’ ಎಂದು ಕೂಗಿದರು.

ಗಿಲ್ಲಿ ಮಾತು ಅತಿರೇಕ ಎನಿಸಿ, ರಜತ್ ಆಕ್ರೋಶ ಹೊರಹಾಕಿದರು. ‘ಏನ್ ಮಾತಾಡ್ಬೇಕು ಅಂತ ಮಾತಾಡ್ತಿದ್ದೀಯ ಗಿಲ್ಲಿ ನೀನು.. ಎಲ್ಲದಕ್ಕೂ ಒಂದು ತಾಳ್ಮೆ ಇದೆ ಗಿಲ್ಲಿ.. ಇರಿಟೇಟ್ ಮಾಡ್ತಿದ್ದೀಯ ತುಂಬಾ.. ಒಂದು ಸರಿ ಹೇಳಿದರೆ ಅರ್ಥ ಮಾಡ್ಕೋಬೇಕು ಲೋ..’ ಅಂತ ರಜತ್ ಕೆಂಡಕಾರಿದ್ದಾರೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋದಂತೆ ಮನೆ ಭಾಸವಾಗುತ್ತಿದೆ. ಮುಂದೇನಾಗುತ್ತೋ ಅನ್ನೋದನ್ನ ಕಾದುನೋಡಬೇಕಿದೆ.

