ಬೆಂಗಳೂರು: ನಂದಿನಿ ತುಪ್ಪವನ್ನ (Nandini Ghee) ಕಲಬೆರಕೆ ಮಾಡುತ್ತಿದ್ದ ಪ್ರಕರಣದಲ್ಲಿ ಪ್ರಮುಖ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ.
ಶಿವಕುಮಾರ್ ಹಾಗೂ ರಮ್ಯಾ ಬಂಧಿತ ಆರೋಪಿ ದಂಪತಿ. ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್ಗಳಿಗೆ ನಕಲಿ ತುಪ್ಪ ಸರಬರಾಜು ಮಾಡುತ್ತಿದ್ದರು. ತಮಿಳುನಾಡಿನಲ್ಲಿ ಘಟಕ ಹೊಂದಿದ್ದ ಕಿಂಗ್ ಪಿನ್ ದಂಪತಿ ರಾಜ್ಯದಲ್ಲಿ ಕಲಬೆರಕೆ ತುಪ್ಪ ತಯಾರಿಸಿ, ಪ್ಯಾಕೆಟ್ ಹಾಗೂ ಪ್ಲ್ಯಾಸ್ಟಿಕ್ ಬಾಟಲ್ನಲ್ಲಿ ಸಪ್ಲೈ ಮಾಡುತ್ತಿದ್ದರು. ಇದನ್ನೂ ಓದಿ: ಬೆಂಗಳೂರಿಗೆ ಕಾಲಿಟ್ಟಿದ್ದಾಳೆ ನಕಲಿ ನಂದಿನಿ – 1.5 ಕೋಟಿ ಮೌಲ್ಯದ 8 ಸಾವಿರ ಲೀಟರ್ ತುಪ್ಪ ಸೀಜ್

ಸಿಸಿಬಿ ಪೊಲೀಸರ ದಾಳಿ ವೇಳೆ ತುಪ್ಪ ತಯಾರಿಸುವ ದೊಡ್ಡ ಅತ್ಯಾಧುನಿಕ ಮೆಷಿನ್ಗಳು ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಆತನ ಮಗ ದೀಪಕ್, ಮುನಿರಾಜು ಎಂಬುವರನ್ನ ಸಿಸಿಬಿ ಬಂಧಿಸಿತ್ತು.
ಅಲ್ಲದೇ ಬರೋಬ್ಬರಿ 1.50 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪವನ್ನ ಜಪ್ತಿ ಮಾಡಿತ್ತು. ಇದೀಗ ಕಿಂಗ್ಪಿನ್ ದಂಪತಿಯನ್ನ ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದೆ. ಇದನ್ನೂ ಓದಿ: 7.11 ಕೋಟಿ ದರೋಡೆ ಕೇಸ್ – ಗರ್ಭಿಣಿ ಹೆಂಡತಿಯರ ಆರೋಗ್ಯ ವಿಚಾರಿಸಲು ಹೋಗಿ ಸಿಕ್ಕಿಬಿದ್ದ ಇಬ್ಬರು ಆರೋಪಿಗಳು

