– ನಿರ್ದೇಶಕ ನಂದ ಕಿಶೋರ್‌ಗೆ ಸಾಲ ಕೊಟ್ಟಿದ್ದ ಉದ್ಯಮಿ
ಬೆಂಗಳೂರು: ಉದ್ಯಮಿ ಮನೋಜ್ ಅಪಹರಣದಲ್ಲಿ ರೌಡಿಶೀಟರ್ ಬೇಕರಿ ರಘುನನ್ನ (Bakery Raghu) ಸಿಸಿಬಿ ಪೊಲೀಸರು ಮಂಡ್ಯ ಬಳಿ ಬಂಧಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸಿನಿಮಾ ನಿರ್ದೇಶಕ ನಂದಕಿಶೋರ್‌ಗೆ (Nanda Kishore) ರೌಡಿ ಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ ಮೂಲಕ ಸಾಲ ಕೊಟ್ಟಿದ್ದ ಉದ್ಯಮಿ ಮನೋಜ್‌ನ ಅಪಹರಣವಾಗಿತ್ತು. ಇದಕ್ಕೆ ಬೇಕರಿ ರಘುನ ಅಣ್ಣ ಶ್ರೀನಿವಾಸ್ ಮತ್ತು ತಂಡದಿಂದ ಪ್ಲ್ಯಾನ್ ನಡೆದಿತ್ತು, ಇದರಲ್ಲಿ ಬೇಕರಿ ರಘು ಪಾತ್ರವೂ ಕೇಳಿಬಂದಿತ್ತು. ಹೀಗಾಗಿ ಕೋಕಾ (KCOCA) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಅಂದಿನಿಂದ ಹುಡುಕಾಟ ನಡೆಸಿದ್ದರು. ಮಂಗಳವಾರ ರಾತ್ರಿ ಮಂಡ್ಯ ಬಳಿ ಬೇಕರಿ ರಘುನನ್ನ ಬಂಧಿಸಿದ್ದಾರೆ. ಇಂದು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಕಿಡ್ನ್ಯಾಪ್ – ನಿರ್ದೇಶಕ ನಂದಕಿಶೋರ್‌ಗೆ ಹಣ ಕೊಡಿಸಿದ್ದ ರೌಡಿಶೀಟರ್

ಏನಿದು ಪ್ರಕರಣ?
ರೌಡಿಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ, ಮನೋಜ್‌ನಿಂದ ನಂದ ಕಿಶೋರ್‌ಗೆ 1.2 ಲಕ್ಷ ಹಣವನ್ನ ಸಾಲವಾಗಿ ಕೊಡಿಸಿದ್ದ. ಹಣ ಹಿಂದಿರುಗಿಸೋದು ತಡವಾದಾಗ ಕೊಟ್ಟ ಹಣ ವಾಪಸ್ ಕೊಡಿಸುವಂತೆ ಕೇಳ್ತಿದ್ದ. ನೀನೇ ಹಣ ಕೊಡಿಸಿದ್ದು ವಾಪಸ್ ಕೊಡಿಸು ಅಂತಾ ರಾಜೇಶನಿಗೆ ಮನೋಜ್ ದುಂಬಾಲು ಬಿದ್ದಿದ್ದ. ಇದೇ ಸಂದರ್ಭದಲ್ಲಿ ಬೇಕರಿ ರಘು ಅಣ್ಣ ರೌಡಿ ಶ್ರೀನಿವಾಸ್, ಲೋಕಿ, ಸೋಮ ಅವರ ಗ್ಯಾಂಗ್ ಉದ್ಯಮಿ ಮನೋಜ್‌ನ ಅಪಹರಣ ಮಾಡಿತ್ತು. ನೆಲಮಂಗಲದ ಬಳಿ ಕರೆದೊಯ್ದು ಹಲ್ಲೆ ಮಾಡಿ ಹಣ ಕಿತ್ತ್ಕೊಂಡು ಬಿಟ್ಟು ಕಳಿಸಿದ್ರು.
ಪ್ರಕರಣ ಸಂಬಂಧ 6 ಮಂದಿಯನ್ನ ಬಂಧಿಸಿದ್ದ ಸಿಸಿಬಿ ಪೊಲೀಸರು ಬೇಕರಿ ರಘುಗಾಗಿ ಹುಡುಕಾಟ ನಡೆಸಿದ್ದರು. ನಿನ್ನೆ ಮಂಡ್ಯ ಬಳಿ ಬೇಕರಿ ರಘುನನ್ನ ಅರೆಸ್ಟ್ ಮಾಡಿದ್ದಾರೆ. ಇಂದು ಕೋರ್ಟ್‌ಗೆ ಹಾಜರು ಪಡಿಸಿ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಜೀವ ಬೆದರಿಕೆ ಕೇಸ್ – ಆರೋಪಿಗಳಾದ ಬೇಕರಿ ರಘು, ಯಶಸ್ವಿನಿಗೆ ಜಾಮೀನು ಮಂಜೂರು

