ಬೆಂಗಳೂರು: ಇವಿ ಬಸ್‌ಗಳನ್ನು (EV Bus) ಓಡಿಸುವ ವೇಳೆ ಚಾಲಕರು ಮೊಬೈಲ್ (Mobile) ಬಳಸದಂತೆ ನಿಷೇಧ ಹೇರಿ ಬಿಎಂಟಿಸಿ (BMTC) ಆದೇಶ ಹೊರಡಿಸಿದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಅಪಘಾತ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆ ಅಪಘಾತಗಳಿಗೆ ಮೊಬೈಲ್ ಬಳಕೆಯೂ ಕಾರಣವಾಗಿರುವ ಸಾಧ್ಯತೆಯಿದೆ. ಆದ್ದರಿಂದ ಈ ಆದೇಶ ಹೊರಡಿಸಲಾಗಿದೆ. ಅಲ್ಲದೇ ಡಿಜಿಟಲ್ ಗ್ಯಾಜೆಟ್ಸ್‌ಗಳಾದ ಬ್ಲೂಟೂತ್ ಹಾಗೂ ಇಯರ್ ಫೋನ್‌ಗಳನ್ನೂ ಬಳಸುವಂತಿಲ್ಲ. ಸಂಗೀತ/ಆಡಿಯೋ ಆಲಿಸುವುದು ಹಾಗೂ ಚಾಟಿಂಗ್ ಕೂಡ ಮಾಡುವಂತಿಲ್ಲ ಎಂದು ಬಿಎಂಟಿಸಿ ತಿಳಿಸಿದೆ. ಇದನ್ನೂ ಓದಿ: ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ದುರ್ಮರಣ – ಇಂದು ಹುಟ್ಟೂರಲ್ಲಿ ಅಂತ್ಯಕ್ರಿಯೆ
ಈ ನಿಯಮಗಳನ್ನು ಉಲ್ಲಂಘಿಸಿದರೇ ಡ್ರೈವರ್ ಜೊತೆ ಕಂಡಕ್ಟರ್‌ಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬಿಎಂಟಿಸಿ ಭದ್ರತಾ ಹಾಗೂ ಜಾಗೃತಾ ನಿರ್ದೇಶಕರು ಎಲ್ಲಾ ಡಿಪೋ ಮ್ಯಾನೇಜರ್‌ಗಳಿಗೂ ತಿಳುವಳಿಕೆ ನೀಡುವಂತೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಹಾವೇರಿ | ಶಾರ್ಟ್ ಸರ್ಕ್ಯೂಟ್‌ನಿಂದ 2 ಮೊಬೈಲ್ ಮಳಿಗೆಗಳು ಸುಟ್ಟು ಭಸ್ಮ

