ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನ (Congress) ಪವರ್ ಶೇರ್ ಫೈಟ್ ದೆಹಲಿಗೆ ಶಿಫ್ಟ್ ಆಗುತ್ತಿದೆ. ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ದೆಹಲಿಗೆ (Delhi) ವಾಪಸ್ ಆಗುತ್ತಿದ್ದಾರೆ.
ನಾಳೆ ಮಧ್ಯಾಹ್ನ ಖರ್ಗೆ ದೆಹಲಿಗೆ ತಲುಪಲಿದ್ದು, ನಾಳೆ ಸಂಜೆಯೇ ರಾಹುಲ್ ಗಾಂಧಿ ಭೇಟಿ ಸಾಧ್ಯತೆ ಇದೆ. ರಾಹುಲ್ ಗಾಂಧಿ ಮುಂದೆ ಸಿಎಂ ಬದಲಾವಣೆ ಬಗ್ಗೆ ರಾಜ್ಯದಲ್ಲಾಗಿರುವ ಬೆಳವಣಿಗೆ ಕುರಿತು ಚರ್ಚೆ ನಡೆಸಲಿದ್ದು, ಸ್ಟೇಟಸ್ ರಿಪೋರ್ಟ್ ನೀಡಬಹುದು. ಇದನ್ನೂ ಓದಿ: ಸುಪ್ರೀಂ ಆದೇಶ ಉಲ್ಲಂಘಿಸಿ ಸಂಡೂರಿನಲ್ಲಿ ಗಣಿ ಹರಾಜು
ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯದ ಮೇಲೆ ರಾಹುಲ್ ಗಾಂಧಿ ಏನ್ ತೀರ್ಮಾನ ಮಾಡ್ತಾರೆ ಅನ್ನೋ ಕುತೂಹಲ ಇದೆ. ಒಂದು ವೇಳೆ ಹೈಕಮಾಂಡ್ ಸದ್ಯಕ್ಕೆ ತೀರ್ಮಾನ ಕಷ್ಟ ಅನ್ನಿಸಿದ್ರೆ, ಈ ವಾರಾಂತ್ಯದಲ್ಲಿ ಸಿಎಂ, ಡಿಸಿಎಂ ಕರೆದು ಚರ್ಚಿಸಿ ಸದ್ಯಕ್ಕೆ ಸುಮ್ಮನಿರಿ, ಸಂಸತ್ತಿನ ಅಧಿವೇಶನ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರೂ ಅಚ್ಚರಿ ಇಲ್ಲ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ನಾನಿನ್ನೂ ಒಂದು ವರ್ಷದ ಮಗು, ನಾಯಕತ್ವ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಿ.ಪಿ.ಯೋಗೇಶ್ವರ್
