ಬಳ್ಳಾರಿ: ಸಂಡೂರಿನಲ್ಲಿ ಸುಪ್ರೀಂ ಕೋರ್ಟ್ (Supreme Court) ಆದೇಶ ಉಲ್ಲಂಘಿಸಿ ಗಣಿ ಹರಾಜು (Coal Mine Auction) ನಡೆದಿದೆ ಎಂದು ಕೇಂದ್ರದ ಉನ್ನತಾಧಿಕಾರಿಗಳ ಸಮಿತಿ(CEC) ವರದಿಯಲ್ಲಿ ಉಲ್ಲೇಖವಾಗಿದೆ
ರಾಜ್ಯ ಸರ್ಕಾರ ಸಂಡೂರಿನ (Sandur) 4,480 ಎಕರೆಯಲ್ಲಿ ವಿಸ್ತಾರಗೊಂಡಿರುವ ಐದು ಗಣಿ ಬ್ಲಾಕ್ (Mining Block) ಹರಾಜಿನಲ್ಲಿ ಆದೇಶ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ (Supreme Court) ಸಿಇಸಿ ವರದಿ ನೀಡಿದೆ.
ಹೊಸದಾಗಿ ಸಂಯೋಜಿಸಿ ರಚಿಸಿರುವ ಐದು ಗಣಿ ಬ್ಲಾಕ್‌ಗಳು ತ್ವರಿತ ಕಾರ್ಯಾಚರಣೆಗೆ ಅನುಮತಿ ಕೋರಿ ಕರ್ನಾಟಕ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಸಂಘ ಹಾಗೂ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನ ಪರಿಶೀಲನೆ ಮಾಡಿದ್ದ ಸುಪ್ರೀಂ ಕೋರ್ಟ್ ಈ ಕುರಿತು ವರದಿ ಸಲ್ಲಿಸುವಂತೆ ಸಿಇಸಿಗೆ ಸೂಚನೆ ನೀಡಿತ್ತು.

ಸೆಪ್ಟೆಂಬರ್ 18 ರಂದು ಸಿಇಸಿಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದರಿಂದ ನವೆಂಬರ್ 3 ರಂದು ಸುಪ್ರೀಂಗೆ ಸಿಇಸಿ 55 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿದೆ. ಸುಪ್ರೀಂಗೆ ಸಲ್ಲಿಸಿದ ವರದಿಯಲ್ಲಿ ಐದು ಗಣಿ ಬ್ಲಾಕ್‌ಗಳು ಕೋರ್ಟ್ ಆದೇಶ ಉಲ್ಲಂಘನೆ ಮಾಡಿರುವ ಬಗ್ಗೆ ಉಲ್ಲೇಖಸಿಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ – ಚಿನ್ನಯ್ಯನಿಗೆ ಜಾಮೀನು ಮಂಜೂರು
ಯಾವುದು 5 ಗಣಿ ಬ್ಲಾಕ್?
ಜೈಸಿಂಗಪುರ ದಕ್ಷಿಣ – 1221. 83 ಎಕರೆ, ಜೈಸಿಂಗಪುರ ಉತ್ತರ – 1490.99 ಎಕರೆ, ಸೋಮನಹಳ್ಳಿ ಅದಿರು ಬ್ಲಾಕ್ 670.94 ಎಕರೆ, ವ್ಯಾಸನಕೇರಿ ಬ್ಲಾಕ್ – 1001.76 ಎಕರೆ ಹಾಗೂ ಎಚ್. ಆರ್. ಗವಿಯಪ್ಪ ಗಣಿ ಬ್ಲಾಕ್ – 98.94 ಎಕರೆ ಗಣಿ ಪ್ರದೇಶ ಸೇರಿದಂತೆ ಈ ಐದು ಗಣಿ ಬ್ಲಾಕ್ ನಿಂದ 108.62 ದಶಲಕ್ಷ ಟನ್ (10.8 ಕೋಟಿ ಟನ್) ಅದಿರು ದಾಸ್ತಾನು ನಿರೀಕ್ಷೆ ಮಾಡಲಾಗಿತ್ತು.

