ರಾಮನಗರ: ನನಗೆ ಯಾವುದೇ ಬಣ ಇಲ್ಲ, ನಾನು ಕಾಂಗ್ರೆಸ್‌ನಲ್ಲಿ (Congress) ಒಂದು ವರ್ಷದ ಮಗು. ನಾಯಕತ್ವ ಬದಲಾವಣೆ ಚರ್ಚೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಶಾಸಕರು ದೆಹಲಿ ಹೋಗಿರುವ ವಿಚಾರ ಕೂಡಾ ಗೊತ್ತಿಲ್ಲ ಎಂದು ಶಾಸಕ ಸಿ.ಪಿ ಯೋಗೇಶ್ವರ್ (CP Yogeshwar) ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಚರ್ಚೆ ಸಂದರ್ಭದಲ್ಲಿ ಸಿಎಂ, ಡಿಸಿಎಂ ಭೇಟಿ ವಿಚಾರ ಕುರಿತು ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್‌ಗೆ ಹೊಸಬ. ಬಾಲಕೃಷ್ಣ ಹಳಬರು, ಹಾಗಾಗಿ ದೆಹಲಿಗೆ ಹೋಗಿರಬಹುದು. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಭಾನುವಾರ ನಮ್ಮ ರಾಷ್ಟ್ರೀಯ ಅಧ್ಯಕ್ಷ ಖರ್ಗೆಯವರೇ ಈ ಬಗ್ಗೆ ಹೇಳಿದ್ದಾರೆ. ಈ ವಿಚಾರದಲ್ಲಿ ನನ್ನನ್ನ ಎಳೆದು ಚರ್ಚಾ ವಿಷಯ ಮಾಡಬೇಡಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ. ಪಕ್ಷದ ನಾಯಕರು ಕರೆದು ಅಭಿಪ್ರಾಯ ಕೇಳಿದ್ರೆ ಹೇಳುತ್ತೇವೆ ಎಂದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ – ಚಿನ್ನಯ್ಯನಿಗೆ ಜಾಮೀನು ಮಂಜೂರು
ಸಿಎಂ, ಡಿಸಿಎಂ ಇಬ್ಬರೂ ನಮ್ಮ ನಾಯಕರು. ಸಿಎಂ ಬಳಿ ಸಹಕಾರ ಇಲಾಖೆಯ ಕೆಲಸದ ವಿಚಾರವಾಗಿ ಮಾತನಾಡಲು ಹೋಗಿದ್ದೆ. ಈಗಲೂ ಪೋನ್‌ನಲ್ಲಿ ಆ ಬಗ್ಗೆ ಮಾತುಕತೆ ಮಾಡಿದೆ. ಡಿಸಿಎಂ ಜೊತೆ ನೀರಾವರಿ ಸಂಬಂಧಿಸಿದ ಕೆಲಸದ ಬಗ್ಗೆ ಮಾತನಾಡಲು ಹೋಗಿದ್ದೆ. ಅಭಿವೃದ್ಧಿ ದೃಷ್ಠಿಯಿಂದ ಇಬ್ಬರ ಬಳಿಯೂ ಚರ್ಚೆ ಮಾಡುತ್ತೇನೆ. ರಾಜಕೀಯ ವಿಚಾರವಾಗಿ ಯಾವುದೇ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ ಸಾಧ್ಯತೆ – 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: IMD
ಬಾಲಕೃಷ್ಣ ಮಂತ್ರಿ ಸ್ಥಾನದ ಆಕಾಂಕ್ಷಿ. ನಮ್ಮ ಜಿಲ್ಲೆಗೆ ಮತ್ತೊಂದು ಮಂತ್ರಿ ಸ್ಥಾನ ಬೇಕಿದೆ. ಹಾಗಾಗಿ ಅದನ್ನ ಕೇಳಲು ಅವರು ದೆಹಲಿಗೆ ಹೋಗಿರಬಹುದು. ಆದಷ್ಟು ಬೇಗ ಇರುವ ಸಣ್ಣಪುಟ್ಟ ಗೊಂದಲ ಬಗೆಹರಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಗೊಂದಲ ಎಲ್ಲಾ ಪಕ್ಷದಲ್ಲೂ ಇದ್ದೇ ಇರುತ್ತೆ. ನಮ್ಮ ಹೈಕಮಾಂಡ್ ಎಲ್ಲವನ್ನೂ ಬಗೆಹರಿಸುತ್ತೆ. ನಾವು ನಮ್ಮ ಅಭಿಪ್ರಾಯವನ್ನ ಮಾಧ್ಯಮದ ಮುಂದೆ ಹೇಳಲು ಆಗಲ್ಲ ಹೇಳಿದರು. ಇದನ್ನೂ ಓದಿ: ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರವೇ ಅಂತಿಮ: ಮಧು ಬಂಗಾರಪ್ಪ
