ಬಾಲಿವುಡ್ ನಟ ಧರ್ಮೇಂದ್ರ (Dharmendra) ಬೆಂಗಳೂರಲ್ಲಿ (Bengaluru) 300 ಎಕ್ರೆ ಜಮೀನು (Land) ಖರೀದಿಸಿದ್ದರು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಧರ್ಮೇಂದ್ರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.
ಧರ್ಮೇಂದ್ರ ನಿಧನದ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಧರ್ಮೇಂದ್ರ 300 ಎಕ್ರೆ ಜಮೀನು ಖರೀದಿಸಿದ್ದರು. ಆಮೇಲೆ ಅದನ್ನು ಮಾರಿಬಿಟ್ಟರು. ಅದನ್ನು ಮಾರಾಟ ಮಾಡಿದ ಮೇಲೆ ಆ ಜಾಗಕ್ಕೆ ಚಿನ್ನದಂತಹ ಬೆಲೆ ಬಂತು. ಧರ್ಮೇಂದ್ರ ತುಂಬಾ ಒಳ್ಳೆಯ ಮನುಷ್ಯ. ಯಾವುದಕ್ಕೂ ಆಸೆ ಪಡುತ್ತಿರಲಿಲ್ಲ. ದೇವರು ಅವರಿಗೆ ಎಲ್ಲವನ್ನೂ ಕೊಟ್ಟ. ಯಾರು ಏನೇ ಹೇಳಿದರೂ ಹೇಮಮಾಲಿಯನ್ನ ತುಂಬಾ ಚೆನ್ನಾಗಿ ನೋಡಿಕೊಂಡರು. ಅವರಿಬ್ಬರ ಲವ್ ಸ್ಟೋರಿಯನ್ನ ನಾನು ನೋಡಿದ್ದೇನೆ ಎಂದರು. ಇದನ್ನೂ ಓದಿ: ಹೇಮಾ ಮಾಲಿನಿಯನ್ನು ವಿವಾಹವಾಗಲು ಇಸ್ಲಾಂಗೆ ಧರ್ಮೇಂದ್ರ ಮತಾಂತರವಾಗಿದ್ರಾ?
ಧರ್ಮೇಂದ್ರ ನನಗೆ ತುಂಬಾ ಹತ್ತಿರದವರು. ಕರ್ನಾಟಕಕ್ಕೆ ಬಂದ ಸಂದರ್ಭ ಅಶೋಕಾ ಹೋಟೆಲ್‌ನಲ್ಲಿ ಇರುತ್ತಿದ್ದರು. ನಾನು, ಅಂಬರೀಷ್, ವಿಷ್ಣುವರ್ಧನ್ ಎಲ್ಲಾ ಜೊತೆಯಲ್ಲಿ ಇರುವ ಫೋಟೋಗಳು ವಿಷ್ಣುವರ್ಧನ್ ಬಳಿ ಇತ್ತು. ಅವರು ಮೊದಲಿಗೆ ಬಣ್ಣ ಹಚ್ಚಿ ಹೀರೋ ಆಗಿದ್ದೇ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ. ಅಲ್ಲಿಂದ ಅವರು ನಮಗೆ ಪರಿಚಯ. 8 ತಿಂಗಳ ಹಿಂದೆ ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಅವರೊಂದಿಗೆ ಒಂದು ಸಿನಿಮಾ ಮಾಡುವ ಯೋಚನೆ ಕೂಡ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯ ಚಿತ್ರರಂಗದ ಒಂದು ಯುಗಾಂತ್ಯ – ಧರ್ಮೇಂದ್ರ ನಿಧನಕ್ಕೆ ಮೋದಿ ಸಂತಾಪ
ಧರ್ಮೇಂದ್ರ ಅಷ್ಟು ದೊಡ್ಡ ಮನುಷ್ಯರಾದರೂ ಸಹ ಬಂಗಾರದ ಮನುಷ್ಯ. ಅವರಿಗೆ ಯಾವುದೇ ರೀತಿಯ ಅಹಂಕಾರ ಇರಲಿಲ್ಲ. ಯಾವುದೇ ನಿರ್ಮಾಪಕರು ಕೂಡ ಅವರನ್ನು ದೂರಲಿಲ್ಲ. ಇವತ್ತು ಅಮಿತಾಬ್ ಬಚ್ಚನ್ ದೊಡ್ಡ ಹೀರೋ ಆಗಿದ್ದಾರೆ ಅಂದ್ರೆ ಅದಕ್ಕೆ ಧರ್ಮೇಂದ್ರ ಕಾರಣ. ಅವರು ದೋಸೆ ಪ್ರಿಯರು. ಮೈಸೂರಿನ ಹೋಟೆಲ್‌ನಲ್ಲಿ ಸಾದಾ ದೋಸೆ ಎಲ್ಲ ಕೊಡಿಸಿದ್ದೆ. ಅದೆಲ್ಲಾ ಅವರಿಗೆ ಇಷ್ಟವಾಗುತ್ತಿತ್ತು. ಸಾಮಾನ್ಯವಾಗಿ ಎಂಟಿಆರ್‌ಗೆ ಹೋಗುತ್ತಿದ್ದರು. ಮೈಸೂರಿಗೆ ಹೋದರೆ ರಾಜ್ ಹೋಟೆಲ್‌ನಲ್ಲಿ ಇರುತ್ತಿದ್ದರು. ಇವರು ತುಂಬಾ ಒಳ್ಳೆಯ ಮನುಷ್ಯ. ಇಂತಹ ಮನುಷ್ಯ ಸಿಗೋದೇ ಕಷ್ಟ. ಯಾವಗ್ಲೋ ನೋಡಿದ್ರೂ ಯಾವತ್ತಿಗೂ ಮರೆಯುತ್ತಿರಲಿಲ್ಲ. ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಬಾಲಿವುಡ್‌ನ ಎವರ್‌ಗ್ರೀನ್ ಸ್ಟಾರ್ ನಟ ಧರ್ಮೇಂದ್ರ ವಿಧಿವಶ
