ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ. ಸಿಎಂ (Siddaramaiah) ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಏನೇ ನಿರ್ಧಾರ ಮಾಡಿದ್ರು ಅದಕ್ಕೆ ನಾವು ಬದ್ಧ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.
ಕಾಂಗ್ರೆಸ್ ಕುರ್ಚಿ ಗಲಾಟೆ ವಿಚಾರಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಬಣ ಇಲ್ಲ. ನಾನು ಯಾರ ಬಣದಲ್ಲಿ ಇಲ್ಲ. ದೆಹಲಿಗೆ ಶಾಸಕರು ಯಾಕೆ ಹೋಗಿದ್ದಾರೆ ಅಂತ ಗೊತ್ತಿಲ್ಲ. ಸಿಎಂ ಬದಲಾವಣೆ ವಿಷಯದ ಬಗ್ಗೆ ನಮಗೇನು ಗೊತ್ತಿಲ್ಲ. 2.5 ವರ್ಷ ಅಗ್ರಿಮೆಂಟ್ ವಿಷಯ ನಮಗೇನು ಗೊತ್ತಿಲ್ಲ ಎಂದರು. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ: ಯು.ಟಿ ಖಾದರ್
ಮಲ್ಲಿಕಾರ್ಜುನ ಖರ್ಗೆ ನಮ್ಮ ಅಧ್ಯಕ್ಷರು. ಅವರನ್ನ ಸಿಎಂ, ಡಿಸಿಎಂ ಮಾತಾಡೋದು ವಿಶೇಷ ಏನು ಅಲ್ಲ. ಏನಾದರು ಗೊಂದಲಗಳು ಇದ್ದರೆ ಹೈಕಮಾಂಡ್ ಅದನ್ನ ಸರಿ ಮಾಡುತ್ತದೆ. ಡಿಕೆ ಸುರೇಶ್ ಯಾಕೆ ಸಿಎಂ ಮಾತಿನ ಬಗ್ಗೆ ಮಾತಾಡಿದ್ರೋ ನನಗೆ ಗೊತ್ತಿಲ್ಲ. ನಾವೆಲ್ಲರು ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: Kolar | ಕೆರೆ ಮಧ್ಯೆ ತೆಪ್ಪದಲ್ಲಿ ಸಿಲುಕಿದ್ದ ಮಗುವಿನ ರಕ್ಷಣೆ
