ನಟಿ ಶ್ರೀಲೀಲಾ(Sreeleela) ತಮ್ಮ ರೂಮರ್ ಗೆಳೆಯನ ಗೆಳೆಯನ ಹುಟ್ಟುಹಬ್ಬವನ್ನು ಖುಲ್ಲಂಖುಲ್ಲಾ ಆಚರಿಸಿದ್ದಾರೆ. ಕನ್ನಡದ ಕಿಸ್ ಬೆಡಗಿ ಶ್ರೀಲೀಲಾ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Kartik Aaryan) ಜೊತೆ ಪ್ರೀತಿಯಲ್ಲಿ ಬಿದ್ದ ವಿಚಾರ ಈಗ ರಹಸ್ಯವಾಗಿ ಉಳಿದಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಮುಂಬೈನಲ್ಲಿ ಶ್ರೀಲೀಲಾ ಅಭಿಮಾನಿಗಳ ಜೊತೆ ಕಾರ್ತಿಕ್ ಆರ್ಯನ್ ಹುಟ್ಟುಹಬ್ಬ (Birth Day) ಆಚರಿಸಿಕೊಳ್ಳುವ ವೇಳೆ ಹಾಜರಿದ್ದರು.
ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ `ಆಶಿಕಿ 3′ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಬಳಿಕ ಇಬ್ಬರ ನಡುವೆ ಪ್ರೀತಿಯ ವದಂತಿ ಹುಟ್ಟಿಕೊಂಡಿತ್ತು. ಸಾಕ್ಷಿ ಎನ್ನುವಂತೆ ಶ್ರೀಲೀಲಾ , ಕಾರ್ತಿಕ್ ಆರ್ಯನ್ ನಡವಳಿಕೆ ಇತ್ತು. ಇದನ್ನೂ ಓದಿ: ತೆಲುಗಿಗೆ ಕನ್ನಡ ಸಿನಿಮಾ ಹೋಲಿಕೆ ಮಾಡಿದ ಸಂದರ್ಶಕನಿಗೆ ಉಪ್ಪಿ ಕ್ಲಾಸ್
View this post on Instagram
ಈಗ ಕಾರ್ತಿಕ್ ಆರ್ಯನ್ ಫ್ಯಾನ್ಸ್ ಜೊತೆಯಾದ ಶ್ರೀಲೀಲಾ ವದಂತಿ ಪ್ರೇಮಿಯ ಹುಟ್ಟುಹಬ್ಬ ಆಚರಿಸಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಟ್ವಿನ್ ಕಲರ್ ಡ್ರೆಸ್ ಧರಿಸಿದ್ದರು. ಬ್ಲರ್ ಆಗಿರುವ ಫೋಟೋವನ್ನು ಇನ್‌ಸ್ಟಾದಲ್ಲಿ ಅಪ್ಲೋಡ್ ಮಾಡಿರುವ ಶ್ರೀಲೀಲಾ ʼಹ್ಯಾಪಿ ಬರ್ತ್‌ಡೇ ಸ್ಟೀಟೆಸ್ಟ್ʼ ಎಂದು ಶುಭ ಕೋರಿದ್ದಾರೆ.

