ಮುಂಬೈ: ಭಾರತ ಮತ್ತು ಶ್ರೀಲಂಕಾದ ಜಂಟಿ ಆತೀತ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ವೇಳಾಪಟ್ಟಿ ನ.25ರಂದು ಪ್ರಕಟವಾಗಲಿದೆ. ಅಂದು ಸಂಜೆ 6:30ಕ್ಕೆ ಐಸಿಸಿ (ICC) ವೇಳಾಪಟ್ಟಿ ಪ್ರಕಟಿಸಲಿದೆ.
ವಿಶ್ವಕಪ್ ಹಿನ್ನೆಲೆ 20 ತಂಡಗಳನ್ನ 4 ಗುಂಪುಗಳಲ್ಲಿ ವರ್ಗೀಕರಿಸಲಾಗಿದ್ದು, ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕ್ (Ind vs Pak) ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡ ಏಷ್ಯಾಕಪ್ (Asia Cup) ಟೂರ್ನಿಯಲ್ಲೂ ಭಾರತ-ಪಾಕ್ ಒಂದೇ ಗುಂಪಿನಲ್ಲಿದ್ದವು, ಹೀಗಾಗಿ ಲೀಗ್ ಸುತ್ತು, ಸೂಪರ್ ಫೋರ್ ಹಾಗೂ ಫೈನಲ್ ಸೇರಿ 3 ಬಾರಿ ಮುಖಾಮುಖಿಯಾಗಿದ್ದವು. ಮೂರು ಬಾರಿಯೂ ಪಾಕ್ ಸೋಲು ಕಂಡಿತು. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಗಿಲ್‌ಗೆ ಕುತ್ತಿಗೆ ನರದ ಸಮಸ್ಯೆ – ಕನ್ನಡಿಗ ಕೆ.ಎಲ್ ರಾಹುಲ್‌ಗೆ ಏಕದಿನ ನಾಯಕನ ಪಟ್ಟ?

ಭಾರತ-ಪಾಕ್ ಫೈನಲ್ ತಲುಪಿದ್ರೆ ಲಂಕಾದಲ್ಲೇ ಮ್ಯಾಚ್
ಈ ಬಾರಿ ಭಾರತದ ಬಳಿಯೇ ಆತಿಥ್ಯ ಇದ್ದರೂ ಸೆಮಿಸ್ ಅಥವಾ ಫೈನಲ್‌ಗೆ ಪಾಕ್ ತಲುಪಿದ್ರೆ, ಆ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯಲಿದೆ. ಏಕೆಂದ್ರೆ ಪಾಕ್ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಭಾರತ ತಂಡ ಪಾಕ್‌ಗೆ ತೆರಳಲು ನಿರಾಕರಿಸಿದರು. ಆ ಬಳಿಕ ನಡೆದ ಪಹಲ್ಗಾಮ್ ಅಟ್ಯಾಕ್, ಅದಕ್ಕೆ ಪ್ರತಿಯಾಗಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಮುರಿದು ಬಿದ್ದಿತು.

ವರದಿಗಳ ಪ್ರಕಾರ, ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ಸಂಪೂರ್ಣ ವಿಭಿನ್ನ ಸವಾಲುಗಳನ್ನ ಎದುರಿಸಲಿವೆ. ಭಾರತ ತಂಡ ಸುಲಭ ಎನ್ನಬಹುದಾದ ಗ್ರೂಪ್‌ನಲ್ಲಿದ್ದರೆ ಶ್ರೀಲಂಕಾ ಕಠಿಣ ಸ್ಪರ್ಧೆಯಿರುವ ಗ್ರೂಪ್‌ನಲ್ಲಿ ಸಿಲುಕಿದೆ. ಹೀಗಾಗಿ ಭಾರತ ಸೆಮಿಸ್ ಪ್ರವೇಶಿಸೋದು ಸುಲಭ ಎನ್ನುವಂತಾಗಿದೆ. ಇದನ್ನೂ ಓದಿ: IND vs SA Test | ಕುಲ್ದೀಪ್ ಸ್ಪಿನ್ ಮ್ಯಾಜಿಕ್ – ಮೊದಲ ದಿನಾಂತ್ಯಕ್ಕೆ ಆಫ್ರಿಕಾ 247ಕ್ಕೆ 6 ವಿಕೆಟ್
ಯಾವ ಗುಂಪಿನಲ್ಲಿ ಯಾವ ತಂಡ?
ʻಎʼ ಗುಂಪು – ಭಾರತ, ಪಾಕಿಸ್ತಾನ, ನೆದರ್ಲೆಂಡ್, ನಮೀಬಿಯಾ, ಯುಎಸ್ಎ
ʻಬಿʼ ಗುಂಪು – ಶ್ರೀಲಂಕಾ, ಆಸ್ಟ್ರೇಲಿಯಾ, ಜಿಂಬಾಬ್ವೆ, ಐರ್ಲೆಂಡ್, ಒಮನ್
ʻಸಿʼ ಗುಂಪು – ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ, ಇಟಲಿ
ʻಡಿʼ ಗುಂಪು – ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಯುಎಇ, ಕೆನಡಾ

ನವೆಂಬರ್ 25 ರಂದು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಐಸಿಸಿ ಅಧಿಕೃತವಾಗಿ ಬಣಗಳು ಹಾಗೂ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಟೂರ್ನಿ 2024ರ ಆವೃತ್ತಿಯಂತೆಯೇ ನಡೆಯಲಿದೆ. ಪ್ರತಿ ಗ್ರೂಪ್‌ನಿಂದ ಅಗ್ರ ಎರಡು ತಂಡಗಳು ಸೂಪರ್-8ಕ್ಕೆ ಪ್ರವೇಶಿಸಲಿವೆ. ನಂತರ, ಅಗ್ರ 4 ತಂಡಗಳು ಸೆಮಿ-ಫೈನಲ್‌ಗೆ ಮುನ್ನಡೆಯಲಿವೆ. ಇದನ್ನೂ ಓದಿ: The Ashes | ಎರಡೇ ದಿನಕ್ಕೆ ಮುಗಿದ ಪಂದ್ಯ – ಆಸೀಸ್‌ಗೆ 8 ವಿಕೆಟ್‌ಗಳ ಜಯ, 1-0 ಸರಣಿ ಮುನ್ನಡೆ
