– ಮಂತ್ರಿ ಸ್ಥಾನ ಬೇಕಾದ್ರೆ ಸುರ್ಜೇವಾಲಗೆ 200 ಕೋಟಿ ಕೊಡಬೇಕಂತೆ; ಆರೋಪ
– ಸುರ್ಜೇವಾಲನ ಮೊದಲು ಅರೆಸ್ಟ್ ಮಾಡುವಂತೆ ಆಗ್ರಹ
ಬೆಂಗಳೂರು: ಕುರ್ಚಿ ಕಿತ್ತಾಟಕ್ಕಾಗಿ ಕಾಂಗ್ರೆಸ್‌ನಲ್ಲೇ ಕುದುರೆ ವ್ಯಾಪಾರ ನಡೆಯುತ್ತಿದೆ. ಒಬ್ಬೊಬ್ಬರು ಶಾಸಕರಿಗೆ 50 ಕೋಟಿ ರೂಪಾಯಿ ಜೊತೆಗೆ ಒಂದು ಫ್ಲ್ಯಾಟ್, ಒಂದು ಫಾರ್ಚುನರ್ ಕಾರು ಆಫರ್ ನಡೀತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ (Congress) ವ್ಯಾಪಾರ ನಡೆಯುತ್ತಿದೆ. ಒಬ್ಬೊಬ್ಬರಿಗೆ 50 ಕೋಟಿ ರೂ. ಕೊಡ್ತಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಚೌಕಾಸಿ ಹೆಚ್ಚಾಗಿ ಕೆಲವರು 75 ಕೋಟಿ, ಇನ್ನೂ ಕೆಲವರು 100 ಕೋಟಿ ಕೊಡಿ ಅಂತ ಕೇಳ್ತಿದ್ದಾರಂತೆ. ಇವರು ಅಷ್ಟಾಗೋದಿಲ್ಲ. ಇಷ್ಟು ತಗೊಳಿ ಅಂತಿದ್ದಾರಂತೆ. 50 ಕೋಟಿ ಮೇಲೆ 1 ಫ್ಲಾಟ್, ಫಾರ್ಚುನರ್ ಕಾರು ಕೊಡ್ತೀವಿ ಅಂತ ಹೇಳ್ತಿದ್ದಾರಂತೆ. ಇಂತಹ ಆಫರ್‌ಗಳು ಕಾಂಗ್ರೆಸ್‌ನಲ್ಲಿ ನಡೀತಿವೆ ಎಂದು ಹೇಳಿದ್ದಾರೆ.
ಮೊದಲು ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನ ಕುದುರೆ ವ್ಯಾಪಾರ ಮಾಡ್ತಿದ್ದಾರೆ ಅಂತ ಕೇಳಿದ್ದೆವು. ಆದ್ರೆ ಈಗ ಕಾಂಗ್ರೆಸ್‌ನಲ್ಲೇ ಅದು ನಡೀತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಾನು ಅಧ್ಯಕ್ಷನಾಗಿದ್ದಾಗ್ಲೂ ಪಕ್ಷ ಅಧಿಕಾರಕ್ಕೆ ಬಂತು, ನಾನೊಬ್ಬನೇ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ: ಪರಮೇಶ್ವರ್
ಸುರ್ಜೇವಾಲನನ್ನ ಅರೆಸ್ಟ್ ಮಾಡಿ
ಸುರ್ಜೇವಾಲಾ ಈಗಾಗಲೇ ವ್ಯಾಪಾರ ಶುರು ಮಾಡಿದ್ದಾರೆ. ಮಂತ್ರಿ ಸ್ಥಾನ ಬೇಕಾದ್ರೆ ಒಬ್ಬ ಮಂತ್ರಿ 200 ಕೋಟಿ ಸುರ್ಜೇವಾಲಗೆ ಕೊಡಬೇಕಂತೆ. ಶಾಸಕ ವೀರೇಂದ್ರ ಪಪ್ಪಿ ಮೊದಲೇ ಅಡ್ವಾನ್ಸ್ ಕೊಟ್ಟಿದ್ದಾರಂತೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಿಎಂ ಆಗ್ತಾರೋ, ಇಲ್ವೋ?- ಮಂಡ್ಯದಲ್ಲಿ ಗಿಣಿ ಶಾಸ್ತ್ರ ಕೇಳಿದ ಬಿಜೆಪಿ ಕಾರ್ಯಕರ್ತರು
ಇದನ್ನ ಮೊದಲು ತನಿಖೆ ಮಾಡಬೇಕು ಸುರ್ಜೇವಾಲನನ್ನ (Randeep Surjewala) ಅರೆಸ್ಟ್ ಮಾಡಬೇಕು. ಕಾಂಗ್ರೆಸ್ ಪಕ್ಷದಲ್ಲೇ ಎರಡು, ಮೂರು, 4 ಪಕ್ಷಗಳಾಗಿವೆ. ದೊಡ್ಡದಾಗಿ ಎರಡು ಪಕ್ಷಗಳು ಕಾಣುತ್ತಿವೆ. ಒಂದು ಸಿಎಂ ಪಕ್ಷ ಇನ್ನೊಂದು ಡಿಸಿಎಂ ಪಕ್ಷ. ಈ ಪಕ್ಷದಲ್ಲಿರುವರನ್ನ ಅವರು ಕೊಂಡುಕೊಳ್ಳೋಕೆ ನೋಡ್ತಿದ್ದಾರೆ. ಅದಕ್ಕಾಗಿ ಪಕ್ಷದಲ್ಲೇ ಕುದುರೆ ವ್ಯಾಪಾರ ನಡೆಯುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿದ್ದು ಟೀಂನಿಂದಲೂ ನಂಬರ್ ಗೇಮ್?- ರಹಸ್ಯವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿಯಾದ ಯತೀಂದ್ರ
