– ನರಗಳ ಗಾಯಕ್ಕೆ ಇಂಜೆಕ್ಷನ್; ಗಿಲ್ ಆರೋಗ್ಯದ ಮೇಲೆ ನಿಗಾ
– ಮುಂದಿನ ವರ್ಷ ತಂಡಕ್ಕೆ ಮರಳುವ ಸಾಧ್ಯತೆ
ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರಿಗೆ ನಾಯಕತ್ವ ಒಲಿಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹಾಲಿ ಕ್ಯಾಪ್ಟನ್ ಶುಭಮನ್ ಗಿಲ್ (Shubman Gill) ಗುತ್ತಿಗೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಏಕದಿನ ಸರಣಿಗೆ ರಾಹುಲ್ ಅವ್ರೇ ನಾಯಕತ್ವ ವಹಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ದಕ್ಷಿಣ ಆಫ್ರಿಕಾ (South Africa) ವಿರುದ್ಧ ಪ್ರಸಕ್ತ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯ ಈಡನ್ ಗಾರ್ಡನ್‌ನಲ್ಲಿ ನಡೆಯಿತು. ಈ ವೇಳೆ ಕ್ರೀಸ್‌ಗಿಳಿದ ಗಿಲ್ ಕುತ್ತಿಗೆ ಗಾಯದ ಸಮಸ್ಯೆಯಿಂದ ಹೊರ ನಡೆದರು. ಇದರಿಂದಾಗಿ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ತಂಡವನ್ನು ರಿಷಭ್ ಪಂತ್ (Rishabh pant) ಮುನ್ನಡೆಸುತ್ತಿದ್ದಾರೆ.

ಟೆಸ್ಟ್ ಸರಣಿಯ (Test Series) ಬಳಿಕ ನವೆಂಬರ್ 30 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಗಿಲ್ ಮೇಲೆ ವೈದ್ಯಕೀಯ ತಂಡ ನಿಗಾ ವಹಿಸುತ್ತಿದ್ದು, ಅವರ ಲಭ್ಯತೆಯ ಬಗ್ಗೆ ಇನ್ನಷ್ಟೇ ಖಚಿತತೆ ಸಿಗಬೇಕಿದೆ. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಕೂಡ ಸರಣಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಮುಂದಿನ ನಾಯಕತ್ವದಲ್ಲಿ ಕೆ.ಎಲ್ ರಾಹುಲ್ ಹೆಸರು ಮುನ್ನೆಲೆಗೆ ಬಂದಿದೆ. ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸಹ ತಂಡದಲ್ಲಿ ಇದಲಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲು; ಆಫ್ರಿಕಾ ವಿರುದ್ಧದ ಟೆಸ್ಟ್ ಮಧ್ಯೆ ಟೀಂ ಇಂಡಿಯಾಕ್ಕೆ ಶಾಕ್ ಕೊಟ್ಟ ಕ್ಯಾಪ್ಟನ್ ಗಿಲ್!
ಕೆ.ಎಲ್ ರಾಹುಲ್ ನಾಯಕತ್ವದ ಅನುಭವ
ಕೆ.ಎಲ್ ರಾಹುಲ್ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾವನ್ನ (Team India) ಮುನ್ನಡೆಸಿದ ಅನುಭವ ಹೊಂದಿದ್ದಾರೆ. 2023ರ ಏಕದಿನ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯನ್ನ 2-1 ಅಂತರದಲ್ಲಿ ಗೆಲ್ಲಿಸಿಕೊಟ್ಟಿದ್ದರು ಕೆ.ಎಲ್ ರಾಹುಲ್. ಅಲ್ಲದೇ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನ ಸತತ 3 ಬಾರಿ ಪ್ಲೇ ಆಫ್‌ಗೆ ಕೊಂಡೊಯ್ದಿದ್ದರು. ಇದೇ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ಫಿನಿಷರ್ ಆಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

ನರಗಳ ಗಾಯಕ್ಕೆ ಇಂಜೆಕ್ಷನ್
ಕುತ್ತಿಗೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಾಯಕ ಶುಭಮನ್ ಗಿಲ್ ಅವರಿಗೆ ಕುತ್ತಿಗೆ ನರಗಳಲ್ಲಿ ಸಮಸ್ಯೆಯಾಗಿದ್ದು, ಇಂಜೆಕ್ಷನ್ ಕೂಡ ನೀಡಲಾಗಿದೆ. ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಹೀಗಾಗಿ ಚೇತರಿಕೆಗೆ ಇನ್ನೂ ಒಂದೆರಡು ತಿಂಗಳ ಕಾಲ ಸಮಯ ಬೇಕಿದ್ದು, ಮುಂದಿನ ವರ್ಷ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿವೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: IPL retentions 2026: ಯಾವ್ಯಾವ ತಂಡದಿಂದ ಯಾವ ಆಟಗಾರರು ಔಟ್ – ಇಲ್ಲಿದೆ ಫುಲ್ ಲಿಸ್ಟ್

ಟಿ20 ವಿಶ್ವಕಪ್‌ನಿಂದ ಔಟಾಗ್ತಾರಾ?
ಸದ್ಯ ವೈದ್ಯಕೀಯ ಮೂಲಗಳ ಪ್ರಕಾರ, ಗಿಲ್ ಆರೋಗ್ಯ ಚೇತರಿಕೆಗೆ ಇನ್ನೂ 2-3 ತಿಂಗಳ ಸಮಯ ಬೇಕಾಗುತ್ತದೆ. ಆದ್ರೆ ಮುಂದಿನ ವರ್ಷ ಫೆಬ್ರವರಿ – ಮಾರ್ಚ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದಕ್ಕೆ ಅಭ್ಯಾಸದ ಅಗತ್ಯವೂ ಇರಲಿದೆ. ಒಂದು ವೇಳೆ ನಿಗದಿತ ಸಮಯಕ್ಕೆ ಗಿಲ್ ಲಭ್ಯ ಇರದಿದ್ದರೆ, ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ ಅಂತ ಹೇಳಲ್ತಾಗಿದೆ. ಇದನ್ನೂ ಓದಿ: The Ashes | ಎರಡೇ ದಿನಕ್ಕೆ ಮುಗಿದ ಪಂದ್ಯ – ಆಸೀಸ್‌ಗೆ 8 ವಿಕೆಟ್‌ಗಳ ಜಯ, 1-0 ಸರಣಿ ಮುನ್ನಡೆ
