ನವದೆಹಲಿ: ದುಬೈ ಏರ್ ಶೋನಲ್ಲಿ ಪತನಗೊಂಡ ಭಾರತೀಯ ವಾಯುಪಡೆಯ ತೇಜಸ್ ಜೆಟ್‌ನ ಪೈಲಟ್ ಕೊನೆಯ ಕ್ಷಣದಲ್ಲಿ ಎಜೆಕ್ಟ್ ಆಗಿ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಹೊಸ ವೀಡಿಯೊ ಒಂದರಲ್ಲಿ ಅಪಘಾತಕ್ಕೀಡಾದ ತೇಜಸ್ ಫೈಟರ್ ಜೆಟ್ ಪೈಲಟ್‌ನ ಅಂತಿಮ ಕ್ಷಣಗಳ ದೃಶ್ಯ ಸೆರೆಯಾಗಿದೆ. WL ಟಾನ್ ಏವಿಯೇಷನ್ ಪೋಸ್ಟ್ ಮಾಡಿರುವ ವೀಡಿಯೊ ಕ್ಲಿಪ್‌ನಲ್ಲಿ ವಿಂಗ್ ಕಮಾಂಡರ್ ನಮಾಂಶ್ ಸಯಾಲ್, ಕೊನೆಯ ಕ್ಷಣದಲ್ಲಿ ಎಜೆಕ್ಟ್ ಆಗಲು ಪ್ರಯತ್ನಿಸಿದಂತೆ ತೋರಿಸುತ್ತಿದೆ. ಆದರೆ ದುರಾದೃಷ್ಟವಶಾತ್ ಜೆಟ್ ಅಷ್ಟರಲ್ಲಾಗಲೇ ನೆಲಕ್ಕೆ ಅಪ್ಪಳಿಸಿ, ಅವರು ಸಾವನ್ನಪ್ಪಿದ್ದರೆ. ಇದನ್ನೂ ಓದಿ: Explainer | 24 ವರ್ಷಗಳ ಇತಿಹಾಸದಲ್ಲಿ 2ನೇ ದುರಂತ – ಒಂದು ʻತೇಜಸ್ʼಗೆ ತಗುಲುವ ವೆಚ್ಚ ಎಷ್ಟು?
ಹೊಸ ವೀಡಿಯೊ ಪ್ರಕಾರ, ಪೈಲಟ್ ಜೆಟ್‌ನ ನಿಯಂತ್ರಣವನ್ನು ಮರಳಿ ಪಡೆಯಲು ಯತ್ನಿಸಿದ್ದಾರೆ. ಅಲ್ಲದೇ ಎಜೆಕ್ಟ್ ಆಗಲು ಯತ್ನಿಸಿದ್ದಾರೆ. ಆದರೆ ಆಗ ತುಂಬಾ ತಡವಾಗಿತ್ತು ಎಂದು ವರದಿಯಾಗಿದೆ.
10 ವರ್ಷಗಳ ಸೇವೆಯಲ್ಲಿ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾದ ತೇಜಸ್‌ಗೆ ಸಂಬಂಧಿಸಿದ ಮೊದಲ ಸಾವು ಇದಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಜೈಸಲ್ಮೇರ್ ಬಳಿ ತೇಜಸ್ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದರು.
ಹಿಮಾಚಲ ಪ್ರದೇಶದ ಕಾಂಗ್ರಾ ನಿವಾಸಿ ವಿಂಗ್ ಕಮಾಂಡರ್ ಸಯಾಲ್ ಅವರ ಅಂತ್ಯಕ್ರಿಯೆ ಇಂದು (ನ.23) ನಡೆಯಲಿದೆ. ಇದನ್ನೂ ಓದಿ: Tejas Crash | ದುಬೈ ಏರ್‌ಶೋನಲ್ಲಿ ತೇಜಸ್ ಯುದ್ಧ ವಿಮಾನ ಪತನ!
