ಸರಳವಾಗಿ ಬೇಗನೆ ಮನೆಯಲ್ಲಿ ತಯಾರಿಸಬಹುದು ಚೀಸಿ ಕಾರ್ನ್ ಡಿಸ್ಕ್.. ಹೌದು, ಒಂಥರ ಪಿಜ್ಜಾ ತಿಂದ ಹಾಗೆ ಇರುತ್ತದೆ. ಆದ್ರೆ ಮಾಡು ವಿಧಾನ ಮಾತ್ರ ತುಂಬಾ ಸುಲಭ. ಪಿಜ್ಜಾ ಮಾಡಿದಷ್ಟು ಕಷ್ಟಪಡಬೇಕಿಲ್ಲ. ಐದೇ ನಿಮಿಷದಲ್ಲಿ ತಯಾರಾಗುತ್ತೆ ಈ ಕಾರ್ನ್ ಡಿಸ್ಕ್..!

ಬೇಕಾಗುವ ಸಾಮಗ್ರಿಗಳು:
ಬ್ರೆಡ್
ಕಾರ್ನ್
ಚೀಸ್
ಕೊತ್ತಂಬರಿ
ಚಿಲ್ಲಿ ಫ್ಲೆಕ್ಸ್
ಉಪ್ಪು
ಮೊಟ್ಟೆ
ಕರಿ ಮೆಣಸಿನ ಪುಡಿ
ಬೆಣ್ಣೆ
ಮಾಡುವ ವಿಧಾನ;
ಮೊದಲಿಗೆ ಚೌಕಾಕಾರದ ಬ್ರೆಡ್ ಅನ್ನು ವೃತ್ತಾಕಾರಕ್ಕೆ ಕತ್ತರಿಸಿಕೊಳ್ಳಬೇಕು. ಒಂದು ಬಟ್ಟಲಿಗೆ ಕಾರ್ನ್, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ, ಚಿಲ್ಲಿ ಫ್ಲೇಕ್ಸ್, ಪೆಪ್ಪರ್ ಪೌಡರ್, ಉಪ್ಪು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು.
ಕಾದ ತವೆಗೆ ಸ್ವಲ್ಪ ಬೆಣ್ಣೆ ಹಾಕಿ, ಅದಕ್ಕೆ ಕತ್ತರಿಸಿದ ವೃತ್ತಾಕಾರದ ಬ್ರೆಡ್ ಪೀಸ್ ಗಳನ್ನು ಹಾಕಿಕೊಳ್ಳಬೇಕು. ಅದರ ಮೇಲೆ ಸಾಸ್, ಮಯೋನಿಸ್ ಹಚ್ಚಿಕೊಳ್ಳಬೇಕು. ನಂತರ ಅದಕ್ಕೆ ಕಲಿಸಿಟ್ಟ ಕಾರ್ನ್ ಮಿಶ್ರಣವನ್ನು ಹಾಕಿ ಸ್ವಲ್ಪ ಬೇಯಿಸಿಕೊಳ್ಳಬೇಕು.
ಇದು ಒಂದು ವಿಧಾನವಾದರೆ ಬೇರೆ ರೀತಿ ತಯಾರಿಸಿಕೊಳ್ಳಬಹುದು. ಕಾದ ತವೆಯ ಮೇಲೆ ಒಂದು ಮೊಟ್ಟೆಯನ್ನು ಒಡೆದು ಅದರ ಮೇಲೆ ಬ್ರೆಡ್ ಮಿಶ್ರಣ ಬಬೇಯಿಸಿಕೊಂಡ ಹಾಗೆಯೇ ಬೇಯಿಸಿಕೊಳ್ಳಬೇಕು.
