– ಖರ್ಗೆ ನಿವಾಸದಲ್ಲಿ 1 ಗಂಟೆಗೂ ಹೆಚ್ಚು ಕಾಲ ಚರ್ಚೆ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ಕುರ್ಚಿ ಕಿತ್ತಾಟದ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ಅವರ ನಿವಾಸಕ್ಕೆ ತೆರಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಇದೊಂದು ಸೌಹಾರ್ದ ಭೇಟಿ ಅಷ್ಟೇ. ಸ್ಥಳೀಯ ಸಂಸ್ಥೆ ಚುನಾವಣೆ, ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದೇವೆ. ಪಕ್ಷ ಸಂಘಟನೆ ಬಗ್ಗೆಯೂ ಮಾತಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕುರ್ಚಿ ಕದನದ ನಡುವೆ ಕುತೂಹಲ ಕೆರಳಿಸಿದ ಸಿಎಂ-ಖರ್ಗೆ ಭೇಟಿ
ಇನ್ನೂ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತೆ ಅದಕ್ಕೆ ಎಲ್ಲರೂ ಬದ್ಧ. ಶಾಸಕರು, ಸಚಿವರು, ಡಿಸಿಎಂ ನಾನು ಕೂಡ ಬದ್ಧ. ಹೈಕಮಾಂಡ್ ಈವರೆಗೆ ದೆಹಲಿಗೆ ಬರಲು ಹೇಳಿಲ್ಲ. ಅವರು ಯಾವಾಗ ಹೇಳ್ತಾರೋ ಆವಾಗ ದೆಹಲಿಗೆ (Delhi) ಹೋಗ್ತೀನಿ. ಹೈಕಮಾಂಡ್ ತೀರ್ಮಾನ ಏನೇ ತೆಗೆದುಕೊಂಡ್ರೂ ನಾನು ಅದಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದ್ರು.
ಇದೇ ವೇಳೆ ಡಲ್ ಆಗಿದ್ದೀರಾ ಸರ್ ಅಂತ ಕೇಳಿದ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿ, ನಾನು ಡಲ್ ಆಗಿಯೇ ಇಲ್ಲ. ನಾನು ಯಾವಾಗಲೂ ಡಲ್ ಆಗೋ ಪ್ರಶ್ನೆಯೇ ಇಲ್ಲ. ಅತೀಯಾಗಿ ಸಂತೋಷವಾಗಿಯೂ ಇರಲ್ಲ ಎಂದು ನುಡಿದರು. ಇದನ್ನೂ ಓದಿ: ಡಿಕೆಶಿ ಅಮಿತ್ ಶಾ ಸಂಪರ್ಕದಲ್ಲಿದ್ದಾರೆ ಅನ್ನೋದು ಸತ್ಯಕ್ಕೆ ದೂರದ ಮಾತು: ವಿಜಯೇಂದ್ರ ಸ್ಪಷ್ಟನೆ
