– ಮೂವರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
ಬೆಂಗಳೂರು: ಇಲ್ಲಿನ ಹೆಚ್ಡಿಎಫ್ಸಿ ಬ್ಯಾಂಕ್ಗೆ (HDFC Bank) ಸೇರಿದ 7 ಕೋಟಿ ಹಣ ದರೋಡೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.
ನವೀನ್, ನೆಲ್ಸನ್ ಹಾಗೂ ರವಿ ಬಂಧಿತ ಆರೋಪಿಗಳು. ಹೈದ್ರಾಬಾದ್ನ (Hyderabad) ಲಾಡ್ಜ್ ನಲ್ಲಿ ಆರೋಪಿಗಳು ತಲೆಮರಿಸಿಕೊಂಡಿರೋದು ಕನ್ಫರ್ಮ್ ಆಗ್ತಿದ್ದಂತೆ ಲಾಡ್ಜ್ ಗೆ ಮಫ್ತಿಯಲ್ಲಿ ಎಂಟ್ರಿ ಕೊಟ್ಟ ಪೊಲೀಸರು ಮೂವರನ್ನ ಲಾಕ್ ಮಾಡಿ 53 ಲಕ್ಷ ಹಣ ರಿಕವರಿ ಮಾಡಿದ್ದಾರೆ. ಇದುವರೆಗೂ ಪ್ರಕರಣದಲ್ಲಿ 6.45 ಕೋಟಿ ಹಣ ಜಪ್ತಿಯಾಗಿದ್ದು, ಇನ್ನು ಪ್ರಕರಣದಲ್ಲಿ 84 ಲಕ್ಷ ಹಣ ರಿಕವರಿ ಆಗಬೇಕಿದೆ.

ಮೂವರನ್ನು ಹೈದ್ರಾಬಾದ್ ನಿಂದ ಬೆಂಗಳೂರಿಗೆ ಇನ್ಸ್ಪೆಕ್ಟರ್ ನಿಂಗನಗೌಡ ಹಾಗೂ ಸಬ್ ಇನ್ಸ್ಪೆಕ್ಟರ್ ಕಿಶೋರ್ ಟೀಂ ಅರೆಸ್ಟ್ ಮಾಡಿ ಕರೆತರ್ತಿದೆ. ಪ್ರಕರಣದಲ್ಲಿ ಇದೀಗ ಒಟ್ಟಾರೆ ಬಂಧಿತರ ಸಂಖ್ಯೆ 6 ಕ್ಕೇರಿದ್ದು, ಮತ್ತಿಬ್ಬರ ಬಂಧನವಾಗಬೇಕಿದೆ. ಇದನ್ನೂ ಓದಿ: ದರೋಡೆ ಕೇಸಲ್ಲಿ 5.76 ಕೋಟಿ ಹಣ ಸೀಜ್ ಮಾಡಲಾಗಿದೆ: ಪೊಲೀಸ್ ಆಯುಕ್ತ ಸೀಮಂತ್ ಕುಮಾರ್
ಮೂವರು 10 ದಿನ ಪೊಲೀಸ್ ಕಸ್ಟಡಿಗೆ:
ಹಾಡಹಗಲೇ ಹೆಚ್ಡಿಎಫ್ಸಿ ಬ್ಯಾಂಕ್ಗೆ ಸೇರಿದ 7 ಕೋಟಿ ಹಣ ದರೋಡೆ ಪ್ರಕರಣ ಸಂಬಂಧ ಇವತ್ತು. ಅರೆಸ್ಟ್ ಆಗಿದ್ದ ಮೂವರು ಆರೋಪಿಗಳನ್ನ 2 ನೇ ಎಸಿಜೆಎಂ ಕೋರ್ಟ್ ಗೆ ಹಾಜರು ಪಡಿಸಲಾಯ್ತು. ಎ1 ಕ್ಸೇವಿಯರ್, ಎ2 ಅಣ್ಣಪ್ಪ ನಾಯ್ಕ್ ಹಾಗೂ ಎ3 ಗೋಪಿಯನ್ನ ಕೋರ್ಟ್ ಗೆ ಸಂಜೆ ವೇಳೆಗೆ ಕರೆತರಲಾಯ್ತು. ಆರೋಪಿಗಳನ್ನ ಉದ್ದೇಶಿಸಿ ಜಡ್ಜ್ ಅರೆಸ್ಟ್ ಮಾಡುವಾಗ ನೋಟಿಸ್ ಕೊಟ್ಟಿದ್ದಾರಾ ಅಂತಾ ಪ್ರಶ್ನೆ ಮಾಡಿದ್ರು. ಆರೋಪಿಗಳು ಕೊಟ್ರು ಅಂತಾ ಉತ್ತರ ನೀಡಿದ್ರು. ಪೊಲೀಸ್ರ 10 ದಿನಗಳ ಕಸ್ಟಡಿ ಮನವಿಗೆ ಆರೋಪಿಗಳ ಪರ ವಕೀಲರು ಈಗಾಗಲೆ 80% ಹಣ ರಿಕವರಿ ಮಾಡಲಾಗಿದೆ. ಐದು ದಿನಗಳಷ್ಟೆ ನೀಡುವಂತೆ ಮನವಿ ಮಾಡಿದ್ರು.
ಕೊನೆಗೆ 1.12.25ರ ವರೆಗೆ 10 ದಿನಗಳ ಕಾಲ ಮೂವರು ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿದ್ರು. ಅಲ್ಲದೇ ವಕೀಲರಿಂದ ಆರೋಪಿಗಳ ಭೇಟಿಗೆ ಸಮಯ ನೀಡುವಂತೆ ಇನ್ಸ್ ಪೆಕ್ಟರ್ ಗೆ ಸೂಚನೆ ನೀಡಿದ್ರು. ಇದನ್ನೂ ಓದಿ: Maharashtra | ಅಂಬರನಾಥ್ ಫ್ಲೈಓವರ್ನಲ್ಲಿ ದ್ವಿಚಕ್ರ ವಾಹನಗಳಿಗೆ ಕಾರು ಡಿಕ್ಕಿ – ನಾಲ್ವರು ಸಾವು, ಮೂವರಿಗೆ ಗಾಯ
