ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಇದುವರೆಗೆ ಕೂಗಾಡದೇ, ಕಿರುಚಾಡದೆ ಇರೋ ಸ್ಪರ್ಧಿ ಹೆಸರು ಕೇಳೋದಾದ್ರೆ ಬಹುಶಃ ಎಲ್ಲರೂ ಮಾಳು ಹೆಸರೇ ಹೇಳ್ತಿದ್ರು.

ಆದರೀಗ ಮಾಳು (Malu Nipanal) ಕೂಡ ರೌದ್ರಾವತಾರ ತೋರಿಸಿದ್ದಾರೆ. ಕಿಚನ್ ಏರಿಯಾದಲ್ಲಿ ಸಹಸ್ಪರ್ಧಿ ರಿಷಾ (Risha Gowda) ಜೊತೆ ಮಾಳು ಧ್ವನಿ ಏರಿಸಿ ಮಾತನಾಡಿದ್ದಾರೆ. ಸುಮ್ನೆ ಹೋಗು ಇದೇ ಲಾಸ್ಟ್ ವಾರ್ನಿಂಗ್ ಎಂದು ರಿಷಾಗೆ ಮಾಳು ವಾರ್ನಿಂಗ್ ಕೊಟ್ಟಿದ್ದಾರೆ.

ಇದುವರೆಗೆ ಜವಾರಿ ಸಿಂಗರ್ ಮಾಳು ಬಿಗ್‌ಬಾಸ್‌ನಲ್ಲಿ ಯಾರೊಂದಿಗೂ ಹೆಚ್ಚು ಜಗಳವಾಡದ ಏಕೈಕ ಸ್ಪರ್ಧಿ ಎಂದು ಕರೆಸಿಕೊಂಡಿದ್ದರು. ಅದ್ಯಾಕೋ ಈಗ ರಿಷಾ ವಿಚಾರಕ್ಕೆ ಮಾಳು ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ರಿಷಾಗೆ ಮಾಳು ಸುಮ್ನೆ ಇರು ಕಿರುಚಬೇಡ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಜಗಳ ಪೀಕ್ ತಲುಪಿದಾಗ ಇಬ್ಬರನ್ನೂ ಸಹಸ್ಪರ್ಧಿಗಳು ತಡೆದಿದ್ದಾರೆ.

ಇಲ್ಲದಿದ್ರೆ ಇನ್ನೂ ಹೆಚ್ಚು ರಾದ್ಧಾಂತ ನಡೆಯುವ ಸಾಧ್ಯತೆ ಇತ್ತು. ಇಷ್ಟು ದಿನ ಸೈಲೆಂಟಾಗಿ ಮಾಳು ಈಗ ವೈಲೆಂಟ್ ಆಗಲು ಅದೇನು ಕಾರಣ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ. ಒಟ್ಟಿನಲ್ಲಿ ಮಾಳು ಅಸಲಿಯಾಗಿ ಈಗ ಆಟ ಶುರುಮಾಡಿಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
