ಸ್ಯಾಂಡಲ್‌ವುಡ್‌ನಲ್ಲಿ ರಚಿತಾ ರಾಮ್ (Rachita Ram) ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಒಂದರ ಹಿಂದೊಂದು ವಿಭಿನ್ನ ಪ್ರಾಜೆಕ್ಟ್‌ಗಳನ್ನ ಆಯ್ಕೆ ಮಾಡಿಕೊಂಡು ಸಿನಿಮಾದಲ್ಲಿ ಸಕ್ರಿಯವಾಗುತ್ತಿರುವ ರಚಿತಾ ರಾಮ್ ಈಗ ಒಂದು ಪಾತ್ರದ ಕುರಿತು ವಿಶೇಷವಾಗಿ ಬರೆದುಕೊಂಡಿದ್ದಾರೆ. ಅದುವೇ ನಿಂಗವ್ವ ಪಾತ್ರ. ಹೌದು ರಚಿತಾ ರಾಮ್ ಹುಟುಹಬ್ಬದ ದಿನ ಈ ಪಾತ್ರದ ಫಸ್ಟ್ ಲುಕ್ ಝಲಕ್ ರಿಲೀಸ್ ಆಗಿ ಭಾರೀ ಸೌಂಡ್ ಮಾಡಿತ್ತು. ನಿಂಗವ್ವ ಇದು `ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ರಚಿತಾ ರಾಮ್ ಪಾತ್ರದ ಹೆಸರು.
`ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ರಚಿತಾ ರಾಮ್ ನಿಂಗವ್ವ ಪಾತ್ರದಲ್ಲಿ ಅಭಿನಯಿಸಿದ್ದು, ಚಿತ್ರೀಕರಣದ ಎರಡು ರಗಡ್ ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಮುರಿದ ಕುರ್ಚಿ ಎತ್ತಿ ಹೊಡೆಯಲು ಸಿದ್ಧರಾದ ಸರಳ ಲುಕ್‌ನಲ್ಲಿ ಕಾಣುವ ರಚಿತಾ ಡಿಗ್ಲ್ಯಾಮರ್ ಪಾತ್ರದಲ್ಲಿ ಮಿಂಚಿದ್ದಾರೆ. ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯವಿರುವ ನಿಂಗವ್ವನ ಪಾತ್ರದಲ್ಲಿ ರಚಿತಾ ಪರಕಾಯ ಪ್ರವೇಶ ಮಾಡಿದಂತೆ ನಟಿಸಿರುವ ಫಸ್ಟ್ಲುಕ್ ವೀಡಿಯೋ ವೈರಲ್ ಆಗಿರುವ ಬೆನ್ನಲ್ಲೇ ರಚ್ಚು ಪಾತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು ವಿಶೇಷ.
`ಲ್ಯಾಂಡ್‌ಲಾರ್ಡ್’ ಚಿತ್ರವನ್ನ ಜಡೇಶ್ ನಿರ್ದೇಶಿಸಿದ್ದು, ಸಾರಥಿ ಸಿನಿಮಾದ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಬಹುವರ್ಷಗಳ ಬಳಿಕ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಟೇರ ಚಿತ್ರದ ಕಥೆಗಾರ ಜಡೇಶ್ ಹಂಪಿ ಇದೀಗ ಮತ್ತೊಂದು ಅದ್ಭುತ ಕಥೆಯೊಂದಿಗೆ ಲ್ಯಾಂಡ್‌ಲಾರ್ಡ್ ಚಿತ್ರದೊಂದಿಗೆ ಬಂದಿದ್ದಾರೆ. ಈ ಚಿತ್ರದ ಮೇಲೆ ರಚಿತಾ ತಮ್ಮ ಪಾತ್ರದ ಬಗ್ಗೆ ಬಹಳ ಕುತೂಹಲ ಇಟ್ಟುಕೊಂಡಿರುವಂತೆ ಕಾಣುತ್ತದೆ.
