ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ (Ashwini Gowda) ಇದುವರೆಗೆ ಅಗ್ರೆಸ್ಸಿವ್ ಆಟದ ವೈಖರಿಯಿಂದ ಬಿಗ್‌ಹೌಸ್‌ನಲ್ಲಿ ಹೆಸರು ಮಾಡಿದ್ದಾರೆ. ಇದೀಗ ಏಕಾಏಕಿ ಉಪವಾಸ ಸತ್ಯಾಗ್ರಹ ಕೈಗೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಯಾರ ಮೇಲಿನ ಕೋಪದಿಂದ ಅಶ್ವಿನಿ ತಮಗೆ ತಾವೇ ಈ ಕಠಿಣ ಶಿಕ್ಷೆ ಅನುಭವಿಸುತ್ತಿದ್ದಾರೆ..? ಊಟದ ಮೇಲ್ಯಾಕೆ ಕೋಪ..? ಎಂಬ ಹಲವು ಪ್ರಶ್ನೆಗಳು ಇದೀಗ ಶುರುವಾಗಿದೆ. ಇಂದು ಪ್ರಸಾರ ಆಗಬೇಕಿರುವ ಕಾರ್ಯಕ್ರಮದ ಪ್ರೋಮೋದಲ್ಲಿ ಅಶ್ವಿನಿ ಊಟ ಮಾಡದೆ ಅಳುತ್ತಾ ಮಲಗಿರುವ ದೃಶ್ಯ ಕಂಡುಬಂದಿದೆ.
ಉಪವಾಸ ಸತ್ಯಗ್ರಹದಿಂದ ಮನೆಯ ವಾತಾವರಣ ಬದಲಾಗುತ್ತಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/bTPqtXyWRE
— Colors Kannada (@ColorsKannada) November 20, 2025
ಕೆಲಸ ಮಾಡುವ ವಿಚಾರಕ್ಕೆ ಅಶ್ವಿನಿ ಕೋಪ ಮಾಡಿಕೊಂಡಂತಿದೆ. ಮನೆಯ ಕ್ಯಾಪ್ಟನ್ ರಘು ಕೆಲಸ ಮಾಡುವಂತೆ ಅಶ್ವಿನಿಗೆ ಹೇಳ್ತಾರೆ. ಆದರೆ, ಅಶ್ವಿನಿ ಆಗಲೇ ಹೊರಡದೆ ಹತ್ತು ನಿಮಿಷ ಸಮಯ ಕೊಡಿ ನನಗೆ ಬ್ಯಾಕ್‌ಪೇನ್ ಇದೆ ಎಂದು ಬೀನ್‌ಬ್ಯಾಗ್‌ಗೆ ಒರಗಿ ಕಣ್ಣುಮುಚ್ಚುತ್ತಾರೆ. ಆದರೆ ಹತ್ತು ನಿಮಿಷದಲ್ಲಿ ಬ್ಯಾಕ್‌ಪೇನ್ ಕಮ್ಮಿ ಆಗುತ್ತಾ ಎಂದು ರಘು ಗೊಣಗಲಾರಂಭಿಸಿದಾಗ ಅಶ್ವಿನಿಗೆ ಕೋಪ ಬರುತ್ತೆ. ಇಬ್ಬರ ನಡುವೆ ಮಾತುಕತೆ ನಡೆಯುವ ವೇಳೆ, ‘ನೀನು’ ಎಂದು ಏಕವಚನ ಪ್ರಯೋಗ ಮಾಡ್ತಾರೆ ರಘು. ಅಲ್ಲಿಂದ ಅಶ್ವಿನಿಯ ಉಪವಾಸ ಸತ್ಯಾಗ್ರಹ ಚಳುವಳಿ ಶುರುವಾದಂತೆ ಕಾಣುತ್ತದೆ. ಇದನ್ನೂ ಓದಿ: ರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ ಸೇರಿದಂತೆ ಹಲವರ ವಿರುದ್ಧ ಅಶ್ಲೀಲ ಹಾಡು ರಚಿಸುತ್ತಿದ್ದ ಭೂಪನ ಮೇಲೆ ಕೇಸ್
ಊಟ ಬಿಟ್ಟು ಮಲಗುವ ಅಶ್ವಿನಿಗೆ ಜಾನ್ವಿ ಊಟದ ತಟ್ಟೆ ತಂದು ಊಟ ಮಾಡುವಂತೆ ಒತ್ತಾಯ ಮಾಡ್ತಾರೆ. ಆದರೂ ಊಟ ಬೇಡವೇ ಬೇಡ ಎಂದು ಅಶ್ವಿನಿ ಪಟ್ಟು ಹಿಡಿದು ಮಲಗುತ್ತಾರೆ. ಹಿಂದೊಮ್ಮೆ ಇದೇ ಬಿಗ್‌ಬಾಸ್‌ನಲ್ಲಿ (Bigg Boss Kannada 12) ಡ್ರೋನ್ ಪ್ರತಾಪ್ ಉಪವಾಸ ಸತ್ಯಾಗ್ರಹ ಮಾಡಿದ್ದರು. ಬಳಿಕ ಸುಸ್ತಾಗಿ ಆಸ್ಪತ್ರೆ ಸೇರಿದ್ದರು. ಇದೀಗ ಅಶ್ವಿನಿ ಎಷ್ಟು ದಿನವ ತಮ್ಮ ಹಠ ಮುಂದುವರೆಸುತ್ತಾರೆ..? ಯಾಕಾಗಿ ಈ ಕಟು ನಿರ್ಧಾರಕ್ಕೆ ಬಂದಿದ್ದಾರೆ ಎಲ್ಲವೂ ಕೆಲವೇ ಗಂಟೆಗಳಲ್ಲಿ ತಿಳಿಯಬೇಕಿದೆ.

