ಪ್ರೇಕ್ಷಕರು ತುಂಬಾ ದಿನಗಳಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9ಕ್ಕೆ ಪ್ರಸಾರವಾಗುವ ‘ನಂದ ಗೋಕುಲ’ ಧಾರಾವಾಹಿಯಲ್ಲಿ (Nandagokula Serial) ಅನಿರೀಕ್ಷಿತ ತಿರುವಿದೆ. ಈ ಬುಧವಾರದ ನಂದಗೋಕುಲದಲ್ಲಿ, ಭಾವನೆಗಳು ತೀವ್ರಗೊಳ್ಳುತ್ತವೆ.

ನಂದ ಕೊನೆಗೂ ಮೀನಾಳನ್ನ ತನ್ನ ಸೊಸೆಯೆಂದು ಒಪ್ಪಿಕೊಂಡು, ಅವಳಿಗೆ ಹೊಸ್ತಿಲು ಶಾಸ್ತ್ರವನ್ನು ನೆರವೇರಿಸುತ್ತಾನೆ. ಇದು ಧಾರಾವಾಹಿಯ ಅನಿರೀಕ್ಷಿತ ತಿರುವು. ಆದರೆ ಅವನ ಈ ಒಪ್ಪಿಕೊಳ್ಳುವಿಕೆ ಹೃದಯಪೂರ್ವಕವೋ – ನಿಜವೋ- ನಾಟಕವೋ- ಇದು ಕಥೆಯಲ್ಲಿ ಮತ್ತೊಂದು ತಿರುವೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇದನ್ನೂ ಓದಿ: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮಹಾತಿರುವು: ನಟಿ ಮೇಘಾಶ್ರೀ ಎಂಟ್ರಿ
ಈ ಶಾಸ್ತ್ರವು ಮೀನಾಳಿಗೆ ನಿಜವಾದ ಹೊಸ ಆರಂಭವಾಗುತ್ತದೆಯೇ, ಅಥವಾ ಕುಟುಂಬದೊಳಗೆ ಹೊಸ ಅಪಾಯಗಳನ್ನು ತೆರೆದಿಡುತ್ತದೆಯೇ? ಈ ಮಹತ್ವದ ವಿಧಿಯ ನಂತರ ನಂದಗೋಕುಲದ ಮನೆಯವರನ್ನು ಯಾವ ಬದಲಾವಣೆಗಳು ಎದುರು ನೋಡುತ್ತಿವೆ ಎನ್ನುವ ಕುತೂಹಲ ಮೂಡಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅಮಾವಾಸ್ಯೆ ಯಾರು? – ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯ್ತು ಒಂದು ಹೇಳಿಕೆ

