ಬೆಂಗಳೂರು: ಕೊತ್ತಲವಾಡಿ ಸಿನಿಮಾದ (Kothalavadi Cinema) ಬಗ್ಗೆ ಅಪಪ್ರಚಾರ ಹಿನ್ನೆಲೆ ನಟ ಯಶ್ ತಾಯಿ ಪುಷ್ಪಾ (Pushpa) ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ (Highground Police Station) ದೂರು ನೀಡಿದ್ದಾರೆ.
ಸ್ವರ್ಣಗೌರಿ ಹಾಗೂ ಪಿಆರ್‌ಒ ಹರೀಶ್ ಸೇರಿ ನಾಲ್ಕು ಮಂದಿಯ ವಿರುದ್ಧ ದೂರು ನೀಡಲಾಗಿದೆ. ಕಳೆದ ಒಂದು ವಾರದ ಹಿಂದೆ ಕೊಟ್ಟಿರುವ ದೂರು ತಡವಾಗಿ ಬೆಳಕಿಗೆ ಬಂದಿದೆ. ಕೊತ್ತಲವಾಡಿ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಿ ಕೊಟ್ಟ ಹಣ ಸರಿಯಾಗಿ ಉಪಯೋಗ ಪಡಿಸಿಕೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹುಂಡಿ ಹಣ ಎಣಿಕೆ; 34 ದಿನದಲ್ಲಿ 5.41 ಕೋಟಿ ಕಾಣಿಕೆ ಸಂಗ್ರಹ
ಎ1 ಹರೀಶ್ ಅರಸು, ಎ2 ಮನು, ಎ3 ನಿತಿನ್, ಎ4 ಮಹೇಶ್ ಗುರು, ಎ5 ಸ್ವರ್ಣಗೌರಿ ವಿರುದ್ಧ ದೂರು ನೀಡಲಾಗಿದೆ. ಸದ್ಯ ಸ್ವರ್ಣಗೌರಿಗೆ ಹೈಗ್ರೌಂಡ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರಿಗೆ ಜಿಬಿಎ ಶಾಕ್ – ಬೀದಿಬದಿ ತಿಂಗಳುಗಟ್ಟಲೆ ವಾಹನ ನಿಲ್ಲಿಸಿದ್ರೆ ದಂಡ

