ಧ್ರುವ ಸರ್ಜಾ ಒಂದು ಸಿನಿಮಾ ಮಾಡೋಕೆ ಕನಿಷ್ಠ ಮೂರು ವರ್ಷಗಳನ್ನ ತೆಗೆದುಕೊಳ್ತಿದ್ರು. ಸಿನಿಮಾಗಳು ತುಂಬಾ ತಡವಾಗ್ತಿದೆ ಅನ್ನೋ ಕೂಗು ಅವ್ರ ಅಭಿಮಾನಿ ಬಳಗದಲ್ಲಿ ಕೇಳಿ ಬರ್ತಿದೆ. ಹೀಗಾಗಿ ಧ್ರುವ ಸರ್ಜಾ ಒಂದು ವರ್ಷದಲ್ಲಿ ಎರಡು ಸಿನಿಮಾ ಮಾಡುವ ಪ್ರಯತ್ನಕ್ಕೆ ಕೈಹಾಕಿದಂತೆ ಕಾಣುತ್ತಿದೆ. ತಮ್ಮ ಕ್ರಿಮಿನಲ್ ಸಿನಿಮಾದ ಮುಹೂರ್ತದ ಸುದ್ದಿಗೋಷ್ಠಿಯಲ್ಲಿ ಬೇಗ ಬೇಗ ಸಿನಿಮಾ ಮಾಡ್ತಿನಿ ಎಂದಿದ್ದಾರೆ.

ಅಂದಹಾಗೆ ಧ್ರುವ ಸರ್ಜಾ ಈ ವೇಳೆ ಮಾತನಾಡಿ. ಉತ್ತರ ಕರ್ನಾಟಕ ಹಾವೇರಿಯ ಹಾನಗಲ್ ನಲ್ಲಿ ನಡೆದ ಪ್ರೇಮ ಕಥೆಯಾಧಾರಿತ ಸಿನಿಮಾ ಮಾಡ್ತಿದ್ದೀನಿ. 99% ಸ್ಟೋರಿ ಏನಿದೆ ಅದೇ ತರ ಶೂಟ್ ಮಾಡ್ತೀವಿ. ಭರ್ಜರಿಯಲ್ಲಿ ತಾಯಿ ಆದ ನಂತ್ರ ತಾರಮ್ಮ ಮತ್ತೆ ಅಮ್ಮನಾಗಿ ಕಾಣಿಸಿಕೊಳ್ತಿದ್ದಾರೆ. ರಚಿತಾ ಭರ್ಜರಿ ನಂತ್ರ ಟಚ್ ಅಲ್ಲಿ ಇದ್ವಿ. ಕಥೆ ಕೇಳಿದ ಮೇಲೆ ರಚಿತಾಗೆ ಹೇಳ್ದೆ ಅವರು ಕೂಡಾ ಒಪ್ಪಿಕೊಂಡ್ರು. ತುಂಬಾನೇ ಯುನಿಕ್ ಸಬ್ಜೆಕ್ಟ್.. ಇಡಿ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರುತ್ತೆ ಅದಕ್ಕಾಗಿ ತಯಾರಿ ಮಾಡಿಕೊಳ್ತಿದ್ದೀನಿ ಎಂದು ಹೇಳಿದರು. ಇದನ್ನೂ ಓದಿ: ಎಂಟು ವರ್ಷಗಳ ಬಳಿಕ ಒಂದಾದ ಧ್ರುವ – ರಚ್ಚು
ಮಾತು ಮುಂದುವರೆಸಿ ಮಾರ್ಚ್ ಅಷ್ಟರಲ್ಲೇ ಸಿನಿಮಾ ಮುಗಿಸ್ಬೇಕು ಅಂತಾ ಪ್ಲ್ಯಾನ್ ಕೂಡಾ ಮಾಡಿದ್ದೇವೆ. ಇನ್ಮೇಲೆ ಒಂದು ಸಿನಿಮಾ ಮುಗಿತಿದ್ದಂತೆ ಮತ್ತೊಂದು ಸಿನ್ಮಾ ಒಪ್ಕೊತೀನಿ. ಬೇಗ ಬೇಗ ಸಿನಿಮಾ ಮಾಡ್ತೀನಿ ಎಂದು ಧ್ರುವ ಸರ್ಜಾ ವೇಳೆ ಮಾತನಾಡಿದ್ದಾರೆ. ಇದನ್ನೂ ಓದಿ: ʻರಾಣಿ ಚೆನ್ನಾಭೈರಾದೇವಿʼ ಆಗ್ತಾರಾ ನಟಿ ರಮ್ಯಾ..?

