ಭಾರೀ ಅಗ್ನಿ ಅವಘಡ – ಚೆನ್ನೈ ಸಿಲ್ಕ್ಸ್ ಕಟ್ಟಡದ 5 ಫ್ಲೋರ್ ಕುಸಿತ

Public TV
1 Min Read
chennai

ಚೆನ್ನೈ: ಇಲ್ಲಿನ ಟಿ ನಗರ್‍ನಲ್ಲಿರುವ ಚೆನ್ನೈ ಸಿಲ್ಕ್ಸ್ಅಂಗಡಿಯಲ್ಲಿ ಬುಧವಾರದಂದು ಭಾರೀ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಇಂದು ಕಟ್ಟಡದ ಮೊದಲ ಐದು ಫ್ಲೋರ್‍ಗಳು ಕುಸಿದು ಬಿದ್ದಿವೆ.

ಬುಧವಾರ ಮುಂಜಾನೆ 7 ಮಹಡಿಗಳ ಕಟ್ಟಡದಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಇಂದು ಕೂಡ ಕಟ್ಟಡದಿಂದ ದಟ್ಟ ಹೊಗೆ ಬರುತ್ತಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. 12 ಜನರನ್ನ ಹೈಡ್ರಾಲಿಕ್ ಲಿಫ್ಟ್ ಬಳಸಿ ರಕ್ಷಣೆ ಮಾಡಲಾಗಿದೆ.

ಸದ್ಯಕ್ಕೆ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಇಲ್ಲಿನ ಕಚೇರಿಗಳು ಹಾಗೂ ಇತರೆ ಅಂಗಡಿಗಳನ್ನು ಎರಡು ದಿನಗಳವರೆಗೆ ಬಂದ್ ಮಾಡಲಾಗಿದೆ. ಸುಮಾರು 150 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. 100ಕ್ಕೂ ಹೆಚ್ಚು ನೀರಿನ ಟ್ಯಾಂಕ್‍ಗಳನ್ನ ಬಳಸಲಾಗಿದೆ. ಇಲ್ಲಿನ ರಸ್ತೆಗಳು ತುಂಬಾ ಕಿರಿದಾಗಿರವುದರಿಂದ ತುರ್ತು ಸಾಧನಗಳನ್ನು ಸ್ಥಳಕ್ಕೆ ತರಲು ಕಷ್ಟವಾಗಿದೆ.

ನೀರು ಕಟ್ಟಡದ ಒಳಗೆ ಆಳವಾಗಿ ಹೋಗಬೇಕೆಂಬ ಕಾರಣಕ್ಕೆ ಕಟ್ಟಡದ ಹೊರಗಿನ ಮುಂಭಾಗವನ್ನು ಕೆಡವಬೇಕಾಯ್ತು ಎಂದು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಶೋರೂಮ್‍ನಲ್ಲಿ ಪ್ಲಾಸ್ಟಿಕ್ ವಸ್ತುಗಳು ಹಾಗೂ ಬಟ್ಟೆಗಳು ಇದ್ದವೆಂದು ಅಧಿಕಾರಿಗಳು ಹೇಳಿದ್ದಾರೆ.

Chennai Silks Fire

Chennai firejpg

chennai fire 1

chennai fire

chennai silks fire 3

Share This Article
Leave a Comment

Leave a Reply

Your email address will not be published. Required fields are marked *