ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸ ಗುಡಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಾಡಿಗೆ ಯಂತ್ರ ತರುತ್ತಿರೋ ಸರ್ಕಾರದ ನಡೆಗೆ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ʻಪೇಮೆಂಟ್, ಮೆರಿಟ್ ಸೀಟ್ ತೀರ್ಮಾನವಾಗಿಲ್ಲʼ – ಕಾಂಗ್ರೆಸ್‌ನಲ್ಲಿ ಪುನಾರಚನೆ, ಪವರ್ ಶೇರ್ ಗೊಂದಲಕ್ಕೆ ಬಿಜೆಪಿ ಟೀಕೆ
ಟ್ವೀಟ್‌ನಲ್ಲಿ ಏನಿದೆ?
ಬೆಂಗಳೂರಿನ ಬಿಬಿಎಂಪಿಯಲ್ಲಿ 26 ಕಸ ಗುಡಿಸುವ ಯಂತ್ರಗಳು ಬಳಕೆಯಾಗದೇ ಧೂಳು ಹಿಡಿದಿವೆ. ಆದರೆ ಉಪಮುಖ್ಯಮಂತ್ರಿಗಳ ನೇತೃತ್ವದ ndian National Congress – Karnataka ಸರ್ಕಾರವು ಈಗ 7 ವರ್ಷಕ್ಕೆ 613 ಕೋಟಿ ರೂ. ಖರ್ಚು ಮಾಡಿ ಪ್ರತಿ ಯಂತ್ರಕ್ಕೆ 1.9 ಕೋಟಿ ರೂ.ಯಂತೆ 46 ಯಂತ್ರಗಳನ್ನು ಬಾಡಿಗೆಗೆ ನೀಡಲು ಸಂಪುಟದಲ್ಲಿ ಒಪ್ಪಿಗೆ ನೀಡಿದೆ. ಅದೇ ಯಂತ್ರಗಳನ್ನು ನೇರವಾಗಿ ಖರೀದಿಸಿದರೆ ಒಂದಕ್ಕೆ ಕೇವಲ 1.33 ಕೋಟಿ ರೂ. ವೆಚ್ಚವಾಗುತ್ತದೆ ಎಂದಿದ್ದಾರೆ.
ಇದು ಕೆಟ್ಟ ಗಣಿತವಲ್ಲ, ಇದು ಗಣಿತದ ಕೊಲೆ ಮತ್ತು ಸಮಾಧಿ ಕೂಡ. ತಜ್ಞರ ಸಮಿತಿಯು ಯಂತ್ರಗಳನ್ನು ಖರೀದಿಸಲು ಶಿಫಾರಸು ಮಾಡಿತ್ತು ಮತ್ತು ಬಿಸಿಜಿ ಸಂಸ್ಥೆಯು ಕಾರ್ಯಕ್ಷಮತೆಗಾಗಿ ಪಾವತಿಸುವ ಮಾದರಿಯನ್ನು ಪ್ರತಿಪಾದಿಸಿತ್ತು. ರಾಜ್ಯ ಸರ್ಕಾರವು ಹೊಸ ಆರ್ಥಿಕ ಸಿದ್ಧಾಂತವನ್ನು ರಚಿಸಿ, ಅತ್ಯಂತ ದುಬಾರಿ ಆಯ್ಕೆಯನ್ನು ಆರಿಸಿ ಮತ್ತು ಅದಕ್ಕೆ ಆಡಳಿತ ಎಂದು ಲೇಬಲ್ ಮಾಡಿದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: 2 ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡ್ತೇವೆ – ಲಕ್ಷ್ಮೀ ಹೆಬ್ಬಾಳ್ಕರ್

