ನವದೆಹಲಿ: ನ.10ರಂದು ಐತಿಹಾಸಿಕ ಕೆಂಪು ಕೋಟೆ (Red Fort) ಬಳಿ ನಡೆದಿದ್ದ ಕಾರು ಸ್ಫೋಟ (Delhi Blast) ಸಮಯದಲ್ಲಿ ಆ ಪ್ರದೇಶದ ಸುತ್ತಮುತ್ತ 68 ಅನುಮಾನಾಸ್ಪದ ಮೊಬೈಲ್ (Mobile) ಸಂಖ್ಯೆಗಳು ಸಕ್ರಿಯವಾಗಿದ್ದವು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಸುನ್ಹಾರಿ ಬಾಗ್ ಪಾರ್ಕಿಂಗ್ ಸ್ಥಳ ಮತ್ತು ಬಾಂಬ್ ಸ್ಫೋಟದ ಸ್ಥಳದಲ್ಲಿ ಒಟ್ಟು 68 ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳು ಸಕ್ರಿಯವಾಗಿವೆ. ಪಾಕಿಸ್ತಾನ ಮತ್ತು ಟರ್ಕಿಯಿಂದ ಕರೆಗಳು ಬಂದಿವೆ. ಸ್ಫೋಟಕ್ಕೆ ಸ್ವಲ್ಪ ಸಮಯ ಮೊದಲು ಭಾರತೀಯ ನೆಟ್‍ವರ್ಕ್‍ನಲ್ಲಿ ಅನುಮಾನಾಸ್ಪದ ಸಂಖ್ಯೆಗಳಿಂದ ಅಸಾಮಾನ್ಯ ಡೇಟಾ ಸ್ಪೈಕ್‍ಗಳು ದಾಖಲಾಗಿವೆ. ಇದನ್ನೂ ಓದಿ: ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ – ಬಾಂಬರ್ ಉಮರ್
ಸುನ್ಹಾರಿ ಬಾಗ್ ಪಾರ್ಕಿಂಗ್ ಸ್ಥಳದಲ್ಲಿ ಉಮರ್ ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಾರು ನಿಲ್ಲಿಸಿದ್ದ. ಈ ಸಮಯದಲ್ಲಿ 30 ಮೀಟರ್ ವ್ಯಾಪ್ತಿಯಲ್ಲಿ 187 ಫೋನ್ ಸಂಖ್ಯೆಗಳು ಸಕ್ರಿಯವಾಗಿದ್ದವು. ಬಾಂಬ್ ದಾಳಿಗೆ ಐದು ನಿಮಿಷಗಳ ಮೊದಲು ಮತ್ತು ಐದು ನಿಮಿಷಗಳ ನಂತರ ಒಟ್ಟು 912 ಫೋನ್‍ಗಳು ಸಕ್ರಿಯವಾಗಿದ್ದವು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಎನ್‍ಐಎ ಅಧಿಕಾರಿಗಳು ಎರಡೂ ಸ್ಥಳಗಳಲ್ಲಿ ಒಂದೇ ಸಮಯದಲ್ಲಿ ಸಕ್ರಿಯವಾಗಿದ್ದ 68 ಮೊಬೈಲ್ ಸಂಖ್ಯೆಗಳ ಬೆನ್ನು ಬಿದ್ದಿದ್ದಾರೆ. ಇದನ್ನೂ ಓದಿ: ದೆಹಲಿ ಬಾಂಬ್ ಸ್ಫೋಟ – ಅಲ್-ಫಲಾಹ್ ವಿವಿ ಸೇರಿದಂತೆ 25 ಕಡೆ ಇಡಿ ದಾಳಿ

